ಸಿದ್ದರಾಮಯ್ಯ ಮಂಡಿಸಿದ ಬಜೆಟ್’ನಲ್ಲಿ ವಿಶೇಷತೆ ಏನಿಲ್ಲ, ಆದಾಯ ಹೆಚ್ಚಿಸಲು ಅಬಕಾರಿ ಸುಂಕ ಹೆಚ್ಚಳ: ಮಾಜಿ ಸಿಎಂ ಕುಮಾರಸ್ವಾಮಿ

Prasthutha|

ಬೆಂಗಳೂರು: ಆದಾಯ ಹೆಚ್ಚಿಸಲು ಸರ್ಕಾರ ಅಬಕಾರಿ ಸುಂಕವನ್ನು ಹೆಚ್ಚಿಸಿದೆ. ಅನ್ನಭಾಗ್ಯ ಅಕ್ಕಿಗೆ ನೀಡುವ ಹಣ ಅಬಕಾರಿ ಇಲಾಖೆಗೆ ಹೋಗುತ್ತೆ. ಆ ಅನ್ನಭಾಗ್ಯದ ಹಣವನ್ನು ತೆಗೆದುಕೊಂಡು ಮನೆಗೆ ಹೋಗುತ್ತಾನೋ, ಇನ್ನೆಲ್ಲಿಗೆ ಹೋಗುತ್ತಾನೋ ನನಗೆ ಗೊತ್ತಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

- Advertisement -


ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ವಿಶೇಷತೆ ಏನಿಲ್ಲ ಎಂದಿದ್ದಾರೆ.


ಒಂದೇ ವರ್ಷಕ್ಕೆ ಜನರ ಮೇಲೆ 85,000 ಕೋಟಿ ಸಾಲ ಹೇರುತ್ತಿದ್ದಾರೆ. 1995ರಿಂದ ಈವರೆಗೆ ಸಿದ್ದರಾಮಯ್ಯ ಮಂಡಿಸಿದ 13 ಬಜೆಟ್ ಗಳ ಅಧ್ಯಯನ ಮಾಡಿದ್ದೇನೆ. ದುಡಿಯುವ ಕೈಗಳಿಗೆ ಸ್ವಾವಲಂಬಿಯಾಗಿಸಲು ಯೋಜನೆ ಏನು ಎಂದು ಪ್ರಶ್ನಿಸಿದರು.

- Advertisement -


ನಿಮ್ಮ ಯಾವ ಗ್ಯಾರಂಟಿಗೂ ನನ್ನ ತಕರಾರಿಲ್ಲ. ಇನ್ನೂ ಎರಡು ಗ್ಯಾರಂಟಿಗಳನ್ನು ಕೊಡಿ ನಮ್ಮದೇನು ತಕರಾರಿಲ್ಲ. ಗ್ಯಾರಂಟಿಗಳಿಗೆ ವರ್ಷಕ್ಕೆ 50-60 ಸಾವಿರ ಕೋಟಿ ವೆಚ್ಚ ಆಗಲಿದೆ. ಬೇರೆ ಯಾವುದಕ್ಕೂ ಬಜೆಟ್ ನಲ್ಲಿ ಸರ್ಕಾರ ಹಣ ಮೀಸಲಿಟ್ಟಿಲ್ಲ. ಕೇಂದ್ರ ಮತ್ತು ಹಿಂದಿನ ಸರ್ಕಾರವನ್ನು ದೂಷಿಸುವ ಬಜೆಟ್ ಅಷ್ಟೇ ಎಂದರು.


ನೀರಾವರಿ, ಕೃಷಿಗೆ ಹಾಗೂ ರಾಜ್ಯದ ಜನರು ಬದುಕು ಕಟ್ಟಿಕೊಳ್ಳಲು ಸ್ವಾಭಿಮಾನಿಯನ್ನಾಗಿ ಮಾಡಲು ಬಜೆಟ್ ಎಷ್ಟು ಸಹಕಾರಿಯಾಗುತ್ತೆ. ಕೇಂದ್ರ-ರಾಜ್ಯ ಸರ್ಕಾರ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು. ಪ್ರತಿ ಬಾರಿ ಕೇಂದ್ರದವರನ್ನು ದೂಷಿಸಿದರೆ ಯಾಕೆ ನೆರವು ನೀಡುತ್ತಾರೆ. ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕರ್ನಾಟಕದ ಬಜೆಟ್ ದೇಶಕ್ಕೆ ಸಂದೇಶ ಕೊಡುವ ಬಜೆಟ್ ಅಂತೆ. ಬಹಳ ಆಕರ್ಷಕ ಬಜೆಟ್ ಅಂತೆ, ಈ ಬಜೆಟ್ನಲ್ಲಿ ಏನೂ ಇಲ್ಲ ಎಂದು ವಾಗ್ದಾಳಿ ಮಾಡಿದರು.



Join Whatsapp