ಇಸ್ಲಾಮೋಫೋಬಿಯಾ ಟ್ವೀಟ್: ನಿವೃತ್ತ IPS ಅಧಿಕಾರಿಯ ಟ್ವಿಟ್ಟರ್ ಖಾತೆ ಅಮಾನತು !

Prasthutha|

ನವದೆಹಲಿ: ಇಸ್ಲಾಮೋಫೋಬಿಯಾ ಕುರಿತ ಟ್ವೀಟ್’ಗೆ ಸಂಬಂಧಿಸಿದಂತೆ ಕೇರಳದ ಮಾಜಿ ಪೊಲೀಸ್ ಮಹಾನಿರ್ದೇಶಕ ನಿರ್ಮಲ್ ಚಂದ್ರ ಅಸ್ತಾನ್ ಅವರ ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸಲಾಗಿದೆ.

- Advertisement -

ಟ್ವಿಟ್ಟರ್ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಸರಣಿ ಟ್ವೀಟ್’ಗಳಲ್ಲಿ ಮುಸ್ಲಿಮ್ ವಿರೋಧಿ ಕಮೆಂಟ್’ಗಳನ್ನು ಮಾಡಿದ ಬಳಿಕ ಮಾಜಿ IPS ಅಧಿಕಾರಿಯ ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸಲಾಗಿದೆ. ದ್ವೇಷ ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ಇಸ್ಲಾಮೋಫೋಬಿಯಾ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ಅಸ್ತಾನ ಅವರ ವಿರುದ್ಧ ಕ್ರಮ ಜರುಗಿಸುವ ಒತ್ತಡಕ್ಕೆ ಸಿಲುಕಿದೆ ಎಂದು ತಿಳಿದು ಬಂದಿದೆ.

- Advertisement -

ಸಹರಾನ್’ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕನಿಷ್ಠ ಒಂಬತ್ತು ಮುಸ್ಲಿಮರನ್ನು ಪೊಲೀಸರು ಅಮಾನುಷವಾಗಿ ಥಳಿಸಿರುವ ವೀಡಿಯೋವೊಂದನ್ನು ತುಂಬಾ ಸುಂದರವಾಗಿದೆ ಎಂಬ ಶೀರ್ಷಿಕೆಯಡಿಯಲ್ಲಿ ಕಳೆದ ವಾರ ಅವರು ಟ್ವಿಟ್ಟರ್’ನಲ್ಲಿ ಹಂಚಿಕೊಂಡಿದ್ದರು. ಪ್ರವಾದಿ ವಿರುದ್ಧದ ಹೇಳಿಕೆಯನ್ನು ಖಂಡಿಸಿ ದೇಶದೆಲ್ಲೆಡೆ ಮುಸ್ಲಿಮರು ಪ್ರತಿಭಟನೆ ನಡೆಸಿದ ಒಂದು ದಿನದ ಬಳಿಕ ಅವರು ಈ ವೀಡಿಯೋವನ್ನು ಟ್ವಿಟ್ಟರ್’ನಲ್ಲಿ ಹಂಚಿಕೊಂಡಿದ್ದರು.

ಮುಸ್ಲಿಮರ ವಿರುದ್ಧ ಪೊಲೀಸ್ ಸಿಬ್ಬಂದಿಯ ಅಮಾನುಷ ನಡೆ ಮತ್ತು ಮನೆಗಳ ಧ್ವಂಸವನ್ನು ಶ್ಲಾಘಿಸಿ ನಿರ್ಮಲ್ ಚಂದ್ರ ಅವರು ಎರಡು ಡಝನ್’ಗೂ ಅಧಿಕ ಟ್ವೀಟ್’ಗಳನ್ನು ಪೋಸ್ಟ್ ಮಾಡಿದ್ದಾರೆ.

ಅಷ್ಟು ಮಾತ್ರವಲ್ಲದೆ, ಪ್ರಯಾಗ್’ರಾಜ್ ಮುಸ್ಲಿಮ್ ಪ್ರತಿಭಟನಕಾರರನ್ನು ಪೊಲೀಸರು ಪಾಲಿಕಾರ್ಬೋನೇಟ್ ಪೈಪ್ ಬಳಿಸಿ ಥಳಿಸುತ್ತಿರುವ ಚಿತ್ರಗಳನ್ನು ಟ್ವೀಟ್’ನಲ್ಲಿ ಹಂಚಿದ ಮಾಜಿ ಐಪಿಎಸ್ ಅಧಿಕಾರಿ, ತನ್ನ ಅಧಿಕಾರಾವಧಿಯಲ್ಲಿ ಪ್ರತಿಭಟನೆಗಳನ್ನು ಹತ್ತಿಕ್ಕಲು ಪಾಲಿಕಾರ್ಬೋನೇಟ್ ಪೈಪ್’ಗಳನ್ನು ಬಳಸದಿರುವುದಕ್ಕೆ ವಿಷಾದ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು.

ಅಷ್ಟಕ್ಕೂ ಸುಮ್ಮನಾಗದ ಕೇರಳದ ಮಾಜಿ ಪೊಲೀಸ್ ಮಹಾನಿರ್ದೇಶಕ ನಿರ್ಮಲ್ ಚಂದ್ರ ಅಸ್ತಾನ್ ಹಲವಾರು ಟ್ವೀಟ್’ಗಳಲ್ಲಿ ಉ.ಪ್ರ ಮುಖ್ಯಂತ್ರಿ ಆದಿತ್ಯನಾಥ್ ಅವರನ್ನು ಹೊಗಳುತ್ತಾ, ಪತ್ರಕರ್ತರನ್ನು “ಪಿಂಪ್ಸ್”, “ಈಡಿಯಟ್ಸ್” ಮತ್ತು “ಕತ್ತೆಗಳು” ಎಂದು ಉಲ್ಲೇಖಿಸಿದ್ದಾರೆ.



Join Whatsapp