ಶರಣಾದ ಆರು ಜನ ನಕ್ಸಲರಿಗೆ ಪ್ರೋತ್ಸಾಹ ಧನ ಮಂಜೂರು

Prasthutha|

ಬೆಂಗಳೂರು: ರಾಜ್ಯಮಟ್ಟದ ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿ ಮುಂದೆ ಶರಣಾಗತರಾಗಿ ಮುಖ್ಯಧಾರೆಗೆ ಸೇರಿದ ಆರು ಜನ ನಕ್ಸಲರಿಗೆ ಮೊದಲ ಹಂತದ ಪ್ರೋತ್ಸಾಹಧನ ತಲಾ ಮೂರು ಲಕ್ಷ ರೂ ಮಂಜೂರು ಮಾಡಿ ಚಿಕ್ಕಮಗಳೂರು ಜಿಲ್ಲಾಧಿಕಾರಿಯೂ ಆದ ಎಡಪಂಥಿಯ ತೀವ್ರಗಾಮಿಗಳ ಶರಣಾಗತಿ ಸಮಿತಿ ಅಧ್ಯಕ್ಷ ಅಧಿಕೃತ ಆದೇಶ ಹೊರಡಿಸಿದ್ದಾರೆ.

- Advertisement -

ರಾಜ್ಯ ಸರ್ಕಾರದ ನಿರ್ದೇಶನದಂತೆ ‘ಎ’ ಪ್ರವರ್ಗದ ನಕ್ಸಲೀಯರಾದ ಮುಂಡಗಾರು ಲತಾ, ಸುಂದರಿ ಕುತ್ತಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ, ‘ಬಿ’ ಪ್ರವರ್ಗದ ಕೆ.ವಸಂತ ವೆಲ್ಲೂರು, ತಮಿಳುನಾಡು ಹಾಗೂ ಟಿ.ಎನ್.ಜಿಶಾ ವಯನಾಡು, ಕೇರಳ ಇವರುಗಳ ಶರಣಾಗತಿ ಅರ್ಜಿಯನ್ನು ಅನುಮೋದಿಸಿ ತಲಾ ಮೂರು ಲಕ್ಷ ರೂ ಪ್ರೋತ್ಸಾಹಧನ ಮಂಜೂರು ಮಾಡಿದ್ದಾರೆ.

ಸರ್ಕಾರದ ಸೂಚನೆಯಂತೆ ಎಡಪಂಥೀಯ ತೀವ್ರಗಾಮಿಗಳ ಶರಣಾಗತಿ ಹಾಗೂ ಪುನರ್ವಸತಿ ಜಿಲ್ಲಾ ಸಮಿತಿಯಲ್ಲಿ ಸರ್ವಾನುಮತದಿಂದ ಮೊದಲ ಹಂತದ ಪ್ರೋತ್ಸಾಹಧನ ಮಂಜೂರು ಮಾಡಲು ತೀರ್ಮಾನಿಸಿದ್ದು, ಜಿಲ್ಲಾಧಿಕಾರಿ ಪಿ.ಡಿ. ಖಾತೆಯಲ್ಲಿ ಬಾಕಿ ಉಳಿದ ಹಣದಲ್ಲಿ ಆರು ಜನರಿಗೆ ತಲಾ ಮೂರು ಲಕ್ಷ ರೂ.ಗಳಂತೆ ಒಟ್ಟು 18 ಲಕ್ಷ ರೂ ಮಂಜೂರು ಮಾಡಲಾಗಿದೆ.

- Advertisement -

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಉನ್ನತಾಧಿಕಾರಿಗಳ ಸಮಕ್ಷಮ ಆರು ಜನ ನಕ್ಸಲರು ಶಸ್ತ್ರ ತ್ಯಜಿಸಿ ಶರಣಾದರು. ಈ ಸಂದರ್ಭದಲ್ಲಿ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ರಾಜ್ಯ ಸಮಿತಿ, ಶಾಂತಿಗಾಗಿ ನಾಗರಿಕರ ವೇದಿಕೆ ಸದಸ್ಯರು ಇದ್ದರು‌.



Join Whatsapp