ಸುರತ್ಕಲ್ ಮಾರುಕಟ್ಟೆ ಕಾಮಗಾರಿ‌ ಪೂರ್ಣಗೊಳಿಸಲು ಸಚಿವರಿಗೆ ಇನಾಯತ್ ಅಲಿ ಮನವಿ

Prasthutha|

ಮಂಗಳೂರು: ಸುರತ್ಕಲ್ ಮಾರುಕಟ್ಟೆ ಸಂಕೀರ್ಣದ ಕಾಮಗಾರಿಯನ್ನು ಶೀಘ್ರವೇ ಪುನರಾಂಭಿಸುವಂತೆ ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್ ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮನವಿ ಮಾಡಿದ್ದಾರೆ. ಸಚಿವರು ಮಂಗಳೂರಿಗೆ ಆಗಮಿಸಿದ ಸಂದರ್ಭ ಈ ಮನವಿ ಸಲ್ಲಿಸಿದ್ದಾರೆ‌.

- Advertisement -

ಸುರತ್ಕಲ್ ಮಾರುಕಟ್ಟೆ ಕಾಮಗಾರಿಗೆ 2013ರಲ್ಲಿ ಸಿದ್ದರಾಮಯ್ಯ ಸರ್ಕಾರ ಅನುದಾನ ಮಂಜೂರುಗೊಳಿಸಿ ಕಾಮಗಾರಿಯನ್ನು ಪ್ರಾರಂಭಿಸಲಾಗಿತ್ತು. ಬಳಿಕ ಅರ್ಧದಲ್ಲಿ ನಿಂತಿದೆ. ಸರಿಯಾದ ಮಾರುಕಟ್ಟೆಯಿಲ್ಲದೇ ಸ್ಥಳೀಯರು ಹಾಗೂ ಮಧ್ಯಮ ಮತ್ತು ಬಡ ವರ್ಗದ ವ್ಯಾಪಾರಸ್ಥರು ತೊಂದರೆಗೊಳಗಾಗಿರುತ್ತಾರೆ ಎಂದು ಇನಾಯತ್ ಅಲಿ ತಮ್ಮ ಮನವಿಯಲ್ಲಿ ಸಚಿವರಿಗೆ ತಿಳಿಸಿದ್ದಾರೆ.

ಕಾರ್ಪೋರೇಟರ್‌ಗಳಾದ ಶಶಿಧರ್ ಹೆಗ್ಡೆ, ನವೀನ್ ಡಿಸೋಜಾ, ಅನಿಲ್ ಕುಮಾರ್, ಮುಖಂಡರಾದ ಭಾಸ್ಕರ್ ಮೊಯಿಲಿ, ಪ್ರತಿಭಾ ಕುಳಾಯಿ, ಗಿರೀಶ್ ಆಳ್ವ ಹಾಗೂ ಇನ್ನಿತರರು ಈ ಸಂದರ್ಭ ಉಪಸ್ಥಿತರಿದ್ದರು.



Join Whatsapp