ಎಸ್ಡಿಪಿಐ ಗುರುಪುರ ಬ್ಲಾಕ್‌ ನೂತನ‌ ಕಚೇರಿ ಉದ್ಘಾಟನೆ

Prasthutha|

- Advertisement -

ಗುರುಪುರ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಗುರುಪುರ ಬ್ಲಾಕ್ ಸಮಿತಿ ಇದರ ನೂತನ ಕಚೇರಿಯ ಉದ್ಘಾಟನೆಯನ್ನು ಎಸ್’ಡಿಪಿಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಅತಾವುಲ್ಲಾ ಜೋಕಟ್ಟೆ ನೆರವೇರಿಸಿದರು.


ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಯಾಸೀನ್ ಅರ್ಕುಳ ಅಧ್ಯಕ್ಷತೆ ವಹಿಸಿದ್ದರು.

- Advertisement -


ಮುಖ್ಯ ಅತಿಥಿಗಳಾಗಿ ಎಸ್’ಡಿಪಿಐ ದ‌‌.ಕ ಜಿಲ್ಲಾ ಪ್ರದಾ‌ನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಎಸ್’ಡಿಪಿಐ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರು ಆಸೀಫ್ ಕೋಟೆಬಾಗಿಲು, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಕಾರ್ಯದರ್ಶಿ ಅಶ್ರಫ್ ಅಡ್ದೂರು, ಎಸ್’ಡಿಪಿಐ ಗುರುಪುರ ಬ್ಲಾಕ್ ಸಮಿತಿಯ ಅಧ್ಯಕ್ಷರಾದ ಮುಝಮ್ಮಿಲ್ ನೂಯಿ ಅಡ್ಡೂರು, ಕಾರ್ಯದರ್ಶಿ ಸಾಹಿಕ್ ಅಡ್ಡೂರು, ಗುರುಪುರ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು,ಹಿತೈಷಿಗಳು, ಬೆಂಬಲಿಗರು ಉಪಸ್ಥಿತರಿದ್ದರು.

Join Whatsapp