ಬ್ಲೂಫಿಲಂ ನೋಡೋದು ಕಲಿಸೋದೇ RSS ಶಾಖೆಯಲ್ಲಿ: ಕುಮಾರಸ್ವಾಮಿ ವಾಗ್ದಾಳಿ

Prasthutha|

ಆಲಮೇಲ; ನೀಲಿ ಚಿತ್ರ ನೋಡೋದು ಕಲಿಯಲು RSS ಶಾಖೆಗೆ ಹೋಗಬೇಕಾ? ನನಗೆ ಅವರ ಶಾಖೆಯ ಸಹವಾಸವೇ ಬೇಡ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಹೇಳಿದ್ದಾರೆ.

- Advertisement -


ಆರೆಸ್ಸೆಸ್ ಕುರಿತು ಮಾತನಾಡುವ ಕುಮಾರಸ್ವಾಮಿ ಬೇಕಾದರೆ ಆರೆಸ್ಸೆಸ್ ಶಾಖೆಗೆ ಬಂದು ನೋಡಲಿ ಎನ್ನುವ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಕುಮಾರಸ್ವಾಮಿ ಈ ರೀತಿ ತಿರುಗೇಟು ನೀಡಿದ್ದಾರೆ.


ಸಿಂದಗಿ ಉಪ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಊರಲ್ಲಿ ಬಡವರ ಶಾಖೆ ಇದೆ. ಇಲ್ಲಿ ಕಲಿತಿರುವುದೇ ಸಾಕು ನನಗೆ. ಆ ಶಾಖೆಯಲ್ಲಿ ಕಲಿಯುವುದು ಏನೂ ಬೇಡ ಎಂದು ಹೇಳಿದರು.

- Advertisement -


ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಪರ್ಸೆಂಟೇಜ್ ತೆಗೆದುಕೊಳ್ಳುವುದರಲ್ಲಿ ಮುಂದಿವೆ. ರಾಜ್ಯದಲ್ಲಿ ಎರಡೂ ಪಕ್ಷಗಳನ್ನು ಸೋಲಿಸಲು ಜನತೆ ಮನಸ್ಸು ಮಾಡಬೇಕಿದೆ. ಈ ಎರಡೂ ಪಕ್ಷಗಳು ಜನರ ದುಡ್ಡು ಲೂಟಿ ಹೊಡೆಯುತ್ತಿವೆ. ಸಿಂದಗಿಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮಧ್ಯೆ ಹೋರಾಟ ಇದೆ. ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.

ನನಗೆ ಅವರ ಶಾಖೆ ಬೇಡ , ಇಲ್ಲಿದೆಯಲ್ಲಾ ಈ ಬಡಜನರ ಬಾಂಧವ್ಯದ ಶಾಖೆ ಸಾಕು . ಆರ್.ಎಸ್.ಎಸ್ ನಿಂದ ಬಂದಿರುವ ಹಾಗೂ ಬಿಜೆಪಿ ನಾಯಕರುಗಳ ಬಗ್ಗೆ ಚರ್ಚೆ ಮಾಡೋಕೆ ಹೋದರೆ , ದಿನವೆಲ್ಲಾ ಚರ್ಚೆ ಮಾಡಬಹುದು. ವೈಯಕ್ತಿಕ ಚರ್ಚೆ ಬೇಡ ನಾನು ಕೀಳು ಮಟ್ಟಕ್ಕಿಳಿದು ಚರ್ಚಿಸುವ ಅವಶ್ಯಕತೆ ಇಲ್ಲ. ವೈಯಕ್ತಿಕ ವಿಚಾರಗಳನ್ನು ಚರ್ಚೆ ಮಾಡಬೇಡಿ ಎಂದು ಎರಡೂ ಪಕ್ಷಗಳ ನಾಯಕರಿಗೆ ನಾನು ಹೇಳುತ್ತೇನೆ ಎಂದು ಹೇಳಿದರು.

Join Whatsapp