ಮಂಗಳೂರಿನಲ್ಲಿ ಇನ್ ರೇಡಾರ್​ ಕಣ್ಗಾವಲು: ಸಂಚಾರಿ ನಿಯಮ ಉಲ್ಲಂಘಿಸದೆ ಇರೋದೇ ಬುದ್ಧಿ

Prasthutha|

ಮಂಗಳೂರು: ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪಟ್ಟಿಯಲ್ಲಿರುವ ಮಂಗಳೂರು ಇನ್ಮುಂದೆ ಅತ್ಯಾಧುನಿಕ ಕ್ಯಾಮರಾ ಹಾಗೂ ರೇಡಾರ್ ಕಣ್ಗಾವಲಿಗೆ ಒಳಪಡಲಿದೆ. ನಗರದ ಆಯಕಟ್ಟಿನ ಪ್ರದೇಶಗಳ ಮೇಲೆ ರೇಡಾರ್ ಹದ್ದಿನ ಕಣ್ಣಿಟ್ಟಿದ್ದು ಸಂಚಾರ ನಿಯಂತ್ರಣ ವ್ಯವಸ್ಥೆಯು ಫುಲ್ ಅಪ್ಟೇಡ್ ಆಗಿದೆ. 

- Advertisement -

ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅತ್ಯಾಧುನಿಕ ಟ್ರಾಫಿಕ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಕ್ಯಾಮರಾ ಹಾಗೂ ರೇಡಾರ್ ವ್ಯವಸ್ಥೆ ಅಳವಡಿಸಲಾಗಿದೆ.

ಟ್ರಾಫಿಕ್ ದಟ್ಟನೆ ಹೆಚ್ಚಾದಲ್ಲಿ ಸಿಗ್ನಲ್‌ನಲ್ಲಿ ಬದಲಾವಣೆ ಸೇರಿದಂತೆ ಮೊದಲಾದವನ್ನು ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಮಾಡಲಿದೆ. ಈಗಾಗಲೇ 75ಕ್ಕೂ ಹೆಚ್ಚು ಕ್ಯಾಮೆರಾ ಸ್ಮಾರ್ಟ್ ಸಿಟಿಯಿಂದ ಅಳವಡಿಸಲಾಗಿದ್ದು ಮುಂದೆ 250ಕ್ಕೂ ಹೆಚ್ಚು ಅತ್ಯಾಧುನಿಕ ಕ್ಯಾಮೆರಾ ಅಳವಡಿಸಬೇಕಾಗಿದೆ. ಒಟ್ಟಿನಲ್ಲಿ ಇನ್ಮುಂದೆ ಮಂಗಳೂರು ನಗರದಲ್ಲಿ ವಾಹನಸವಾರರು ಬೇಕಾಬಿಟ್ಟಿ ಸಂಚಾರ ಸುಲಭವಲ್ಲ ಎಂಬುದನ್ನು ಅರಿತು ತಮ್ಮ ಸುರಕ್ಷತೆಗೆ ಮಹತ್ವ ನೀಡಬೇಕಾದ ಅವಶ್ಯಕತೆ ಇದೆ ಎಂದು ತಿಳಿದವರು ಹೇಳುತ್ತಿದ್ದಾರೆ.



Join Whatsapp