ಪಾಕ್ ನಲ್ಲೂ ಕಮಲದ ಕೂಗು | ಬುರ್ಖಾಧಾರಿಗಳಿಗೂ ಬಿಜೆಪಿ ಬೇಕು ಎಂಬ ಸುಳ್ಳು ಸುದ್ದಿ ವೈರಲ್ : ನಿಜಾಂಶವೇನು?!

Prasthutha|

ನವದೆಹಲಿ: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಬಿಜೆಪಿ ಬಾವುಟದೊಂದಿಗೆ ಜನರ ಗುಂಪೊಂದು ಬುರ್ಖಾ ಧರಿಸಿದ ಮಹಿಳೆಯರೂ ಸೇರಿ ಬಿಜೆಪಿಯನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗುವುದು ಮತ್ತು ಪಕ್ಷದ ಧ್ವಜವನ್ನು ಹಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು ಇದು ಸುಳ್ಳು ಸುದ್ದಿ ಎಂದು ತಿಳಿದು ಬಂದಿದೆ.

- Advertisement -

“ಬ್ರೇಕಿಂಗ್ ನ್ಯೂಸ್ ಪಾಕಿಸ್ತಾನದಲ್ಲಿ ಬಿಜೆಪಿ ಬಾವುಟ. ಪಾಕಿಸ್ತಾನದ ಬಲೂಚಿಸ್ತಾನದಲ್ಲಿ, ಮೋದಿ ಅಧಿಕಾರಕ್ಕೆ ಬರುತ್ತಾರೆ ಮತ್ತು ಅವರಿಗೆ ಸ್ವಾತಂತ್ರ್ಯವನ್ನು ನೀಡುತ್ತಾರೆ ಎಂದು ನಂಬುವ ಜನರ ಆಚರಣೆ ಇದಾಗಿದೆ” ಎಂಬ ಶೀರ್ಷಿಕೆಯಲ್ಲಿ ಫೇಸ್ ಬುಕ್ ಮೂಲಕ ವೀಡಿಯೋ ಒಂದನ್ನು ಹಂಚುತ್ತಿದ್ದು ಪ್ರಸಾರವಾಗುತ್ತಿರುವ ವೀಡಿಯೋ  ದಾರಿತಪ್ಪಿಸುವಂತಹದ್ದು ಎಂದು ಕಂಡುಕೊಂಡಿದ್ದು ಈ ವೀಡಿಯೊ ಪಾಕಿಸ್ತಾನದದ್ದಲ್ಲ, ಇದು ಭಾರತದ ಯಾವುದೋ ಒಂದು ಪ್ರದೇಶದ ಹಳೆಯ ವೀಡಿಯೊವಾಗಿದೆ ಎಂಬುವುದು ತಿಳಿದು ಬಂದಿದೆ.

ಮೇ 24, 2019 ರಂದು ಪ್ರೊ.ಎಸ್.ವೇಣುಗೋಪಾಲನ್ ಅವರ ಟ್ವಿಟರ್ ಐಡಿಯಿಂದ ಇದೇ ವೀಡಿಯೋ ಹಂಚಿಕೊಂಡಿದ್ದು ಇದು ಪಾಕಿಸ್ತಾನಕ್ಕೆ ಸೇರಿದ್ದು ಎಂಬ ಮಾಹಿತಿ ತಪ್ಪು ಎಂಬುವುದು ಸ್ಪಷ್ಟವಾಗಿದೆ.

- Advertisement -

Join Whatsapp