ತಿರುವನಂತಪುರ: ಕೇರಳ ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್’ಗೆ 2 ರೂ. ಹೆಚ್ಚಳ ಮಾಡಿದೆ.
ಶುಕ್ರವಾರ ಹಣಕಾಸು ಸಚಿವ ಕೆ.ಎನ್ ಬಾಲಗೋಪಾಲ್ ಅವರು ವಿಧಾನಸಭೆಯಲ್ಲಿ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಈ ವೇಳೆ ಪೆಟ್ರೋಲ್, ಡೀಸೆಲ್ ಮತ್ತು ಭಾರತೀಯ ನಿರ್ಮಿತ ವಿದೇಶಿ ಮದ್ಯ (IMFL) ಮೇಲೆ ಸಾಮಾಜಿಕ ಭದ್ರತಾ ಸೆಸ್ ವಿಧಿಸಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದರು.
ಕೇರಳದಲ್ಲಿ ಶುಕ್ರವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 107.44 ರೂ. ಇದ್ದರೆ ಡೀಸೆಲ್ ಬೆಲೆ 96.26 ರೂ. ಇದೆ.