ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ಅಪರೂಪದ ರನೌಟ್..!

Prasthutha: January 22, 2022

ಢಾಕಾ; ಬಾಂಗ್ಲಾದೇಶ ಪ್ರೀಮಿಯರ್ ಲೀಗ್- ಬಿಪಿಎಲ್ -2022 ಆವೃತ್ತಿಯ ಮೊದಲನೇ ದಿನವೇ ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ಅಪರೂಪದ ರನೌಟ್’ಗೆ ಸಾಕ್ಷಿಯಾಗಿದೆ.ಈ ದುರಾದೃಷ್ಟಕರ ರನೌಟ್’ಗೆ ಬಲಿಯಾಗಿದ್ದು ವಿಂಡೀಸ್’ನ ದೈತ್ಯ ಬ್ಯಾಟರ್ ಆಂಡ್ರೆ ರಸೆಲ್ !

ಕುಲ್ನಾ ಟೈಗರ್ಸ್ ಹಾಗೂ ಢಾಕಾ ಪ್ಲಾಟೂನ್ ತಂಡಗಳ ನಡುವೆ ನಡೆದ ಉದ್ಘಾಟನಾ ದಿನದ ಎರಡನೇ ಪಂದ್ಯದಲ್ಲಿ ಕುಲ್ನಾ ಟೈಗರ್ಸ್ ತಂಡದ ರಸೆಲ್ ರನೌಟ್ ಆದ ರೀತಿ ಕ್ರಿಕೆಟ್ ಜಗತ್ತಿನಲ್ಲಿ ಇದೀಗ ಚರ್ಚೆಯಾಗುತ್ತಿದೆ.ಮೊದಲ ಇನ್ನಿಂಗ್ಸ್’ನಲ್ಲಿ ತಿಸಾರ ಪೆರೆರಾ ಎಸೆದ 15ನೇ ಓವರ್’ನ ಅಂತಿಮ ಎಸೆತವನ್ನು, ಸ್ಟ್ರೈಕ್ ನಲ್ಲಿದ್ದ ರಸೆಲ್, ಶಾರ್ಟ್ ಥರ್ಡ್‌ ಮ್ಯಾನ್ ಕಡೆಗೆ ತಳ್ಳಿ ಒಂಟಿ ರನ್ ತೆಗೆಯಲು ಪ್ರಯತ್ನಿಸಿದರು.

ಕ್ಷೇತ್ರರಕ್ಷಣೆಯಲ್ಲಿದ್ದ ಮೆಹ್ದಿ ಹಸನ್ ಚೆಂಡನ್ನು ಸ್ಟ್ರೈಕ್ ವಿಕೆಟ್’ಅನ್ನು ಗುರಿಯಾಗಿಸಿ ಎಸೆದರು. ಚೆಂಡು ವಿಕೆಟ್’ಗೆ ಬಡಿಯಿತಾದರೂ, ಈ ವೇಳೆ ನಾನ್ ಸ್ಟ್ರೈಕ್’ನಲ್ಲಿದ್ದ ಮಹ್ಮೂದುಲ್ಲಾ ವೇಗವಾಗಿ ಓಡಿ ರನ್ ಪೂರ್ತಿಗೊಳಿಸಿದ್ದರು. ಆದರೆ ಸ್ಟ್ರೈಕ್ ಕಡೆಯ ವಿಕೆಟ್’ಗೆ ಬಡಿದ ಚೆಂಡು ಬೇಲ್ಸ್’ನ್ನು ಹಾರಿಸಿ ಮುಂದುವರಿದು ನಾನ್ ಸ್ಟ್ರೈಕ್ ತುದಿಯಲ್ಲಿದ್ದ ವಿಕೆಟ್ ಬೇಲ್ಸ್’ನ್ನು ಕೂಡ ಹಾರಿಸಿತ್ತು. ಅಪಾಯವೇನಿದ್ದರೂ ಮಹ್ಮೂದುಲ್ಲಾಗೆ ಎಂದು ತಿರುಗಿ ನೋಡುತ್ತಲೇ ನಿಧಾನವಾಗಿ ರನ್ ಓಡುತ್ತಿದ್ದ ರಸೆಲ್ ಕ್ರೀಸ್ ತಲುಪುವ ಮುನ್ನವೇ ಚೆಂಡು ವಿಕೆಟ್’ನ್ನು ‘ಚುಂಬಿಸಿ’ ಆಗಿತ್ತು !
ಆ ಮೂಲಕ ಕೇವಲ 7 ರನ್’ಗಳಿಸಿದ್ದ ರಸೆಲ್ ನಂಬಲಾಗದ ರೀತಿಯಲ್ಲಿ ರನೌಟ್ ಆಗಿ ಪೆವಿಲಿಯನ್ ಕಡೆ ನಡೆದರು.

ಅಂತಿಮವಾಗಿ ಈ ಪಂದ್ಯದಲ್ಲಿ ಕುಲ್ನಾ ಟೈಗರ್ಸ್ 5 ವಿಕೆಟ್’ಗಳಿಂದ ಜಯಭೇರಿ ಬಾರಿಸಿತು.
ಮೊದಲು ಬ್ಯಾಟ್ ಮಾಡಿದ್ದ ಢಾಕಾ ಪ್ಲಾಟೂನ್ ನಿಗದಿತ20 ಓವರ್‌’ಗಳಲ್ಲಿ 6 ವಿಕೆಟ್‌ ನಷ್ಟದಲ್ಲಿ 183 ರನ್ ಗಳಿಸಿದರೆ, ಚೇಸಿಂಗ್ ವೇಳೆ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಕುಲ್ನಾ ಟೈಗರ್ಸ್ ಗುರಿ ತಲುಪಿತು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!