ಬಿಹಾರ: ಅನೈತಿಕ ಸಂಬಂಧ ಆರೋಪಿಸಿ ಮಹಿಳೆಗೆ ಸಾರ್ವಜನಿಕವಾಗಿ ಅಮಾನುಷ ಹಲ್ಲೆ; ವೀಡಿಯೋ ವೈರಲ್

Prasthutha|

ಮಾಧೇಪುರ (ಬಿಹಾರ್): ಮಹಿಳೆಯೊಬ್ಬಳ ಮೇಲೆ ಅನೈತಿಕ ಸಂಬಂಧ ಆರೋಪ ಹೊರಿಸಿ ಪಂಚಾಯತ್ ಕಟ್ಟೆಯಲ್ಲಿ ಸಾರ್ವಜನಿಕವಾಗಿ ಅಮಾನುಷ ರೀತಿಯಲ್ಲಿ ಹಲ್ಲೆ ನಡೆಸಿರುವ ಘಟನೆ ಬಿಹಾರದ ಮಾಧೇಪುರದಲ್ಲಿ ನಡೆದಿದೆ.

- Advertisement -

ಮಹಿಳೆಯ ಮೇಲೆ ಅನೈತಿಕ ಸಂಬಂಧದ ಆರೋಪ ಹೊರಿಸಿ ಪಂಚಾಯತ್ ಸಭೆಯ ಬಳಿಕ ಸ್ಥಳೀಯರ ಎದುರಲ್ಲಿ ಕಬ್ಬಿಣದ ಸಲಾಕೆಯನ್ನು ಬಿಸಿ ಮಾಡಿ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಸಂದರ್ಭದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಲು ಯತ್ನಿಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಸಂತ್ರಸ್ತ ಮಹಿಳೆ, ಗ್ರಾಮದ ಈ ಅಮಾನವೀಯ ನಡೆಯನ್ನು ವಿರೋಧಿಸಿದ ಕಾರಣ ಗ್ರಾಮ ಪಂಚಾಯತ್ ಕಟ್ಟೆಯಲ್ಲಿ ನನ್ನನ್ನು ಬೆತ್ತಲೆ ಮಾಡುವ ಯತ್ನವೂ ನಡೆದಿದ್ದು, ಕೆಲವು ಗ್ರಾಮಸ್ಥರು ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆಂದು ಆರೋಪಿಸಿದ್ದಾರೆ.

Join Whatsapp