ಸಂಘಪರಿವಾರ ದಾಳಿ। ಚರ್ಚ್ ನಲ್ಲಿ ಪ್ರಾರ್ಥನೆ ನಡೆಸದಂತೆ ಎಚ್ಚರಿಸಿದ ಪೊಲೀಸರು !

Prasthutha|

ಬೆಂಗಳೂರು: ಬೆಳಗಾವಿಯಲ್ಲಿ ಸಂಘಪರಿವಾರದ ಕಾರ್ಯಕರ್ತರು ಚರ್ಚ್ ಗಳ ಮೇಲೆ ದಾಳಿ ನಡೆಸಿ, ಪ್ರಾರ್ಥನೆಗೆ ಅಡ್ಡಿ ಪಡಿಸುವ ಘಟನೆಗಳು ನಿರಂತರವಾಗಿ ನಡೆಯುತ್ತಿದೆ. ಇದರಿಂದ ಜಿಲ್ಲೆಯ ಕಾನೂನು ಸುವ್ಯಸ್ಥೆ ಕಾಪಾಡಲು ತೊಂದರೆ ಆಗುವುದರಿಂದ ಪ್ರಾರ್ಥನೆ ನಡೆಸದಂತೆ ಕ್ರೈಸ್ತ ಸಮುದಾಯವನ್ನು ಪೊಲೀಸ್ ಇಲಾಖೆ ಒತ್ತಾಯಿಸಿದೆ.

- Advertisement -

ಈ ಸಂಬಂಧ ಕೆಲವು ಪಾದ್ರಿಗಳನ್ನು ಠಾಣೆಗೆ ಕರೆಯಿಸಿದ ಪೊಲೀಸರು, ಬಲಪಂಥೀಯ ಸಂಘಟನೆಗಳು ಚರ್ಚ್ ಮತ್ತು ಪ್ರಾರ್ಥನಾಲಯಗಳ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ. ಈ ವೇಳೆ ಪೊಲೀಸರಿಗೆ ಭದ್ರತೆ ಒದಗಿಸಲು ಸಾಧ್ಯವಿಲ್ಲ. ಜಿಲ್ಲೆಯ ಕೋಮು ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕ್ರೈಸ್ತ ಸಮುದಾಯ ಪ್ರಾರ್ಥನೆ ನಡೆಸದಂತೆ ಪಾದ್ರಿಗಳನ್ನು ಮೌಖಿಕವಾಗಿ ಎಚ್ಚರಿಸಿದೆ.

ಮಾತ್ರವಲ್ಲ ಸ್ವಂತ ಕಟ್ಟಡಗಳಿದ್ದರೆ ಅದರಲ್ಲಿ ಪ್ರಾರ್ಥನೆ ನಿರ್ವಹಿಸುವಂತೆ ಮನವಿ ಮಾಡಿದ್ದಾರೆ. ಆದರೆ ಬಾಡಿಗೆ ಅಥವಾ ಖಾಸಗಿ ಮನೆಗಳಲ್ಲಿ ಪ್ರಾರ್ಥನೆ ನಡೆಸದಂತೆ ಖಡಕ್ ಸೂಚನೆ ನೀಡಿದ್ದಾರೆ ಎಂದು ಪ್ರಾದಿಗಳು ಆರೋಪಿಸಿದ್ದಾರೆ.

- Advertisement -

ಈ ಮಧ್ಯೆ ಹೆಚ್ಚಿನ ಕ್ರೈಸ್ತರ ಪ್ರಾರ್ಥನೆಗಳು ಬಾಡಿಗೆ ಹಾಲ್ ಅಥವಾ ಖಾಸಗಿ ಮನೆಯಲ್ಲಿ ನಡೆಯುತ್ತಿದ್ದು , ಸಂಘಪರಿವಾರ ಮತಾಂತರ ಆರೋಪದಲ್ಲಿ ನಿರಂತರ ದಾಳಿ ಮಾಡುತ್ತಿದೆ. ಇದರ ವಿರುದ್ಧ ಕ್ರಮ ಜರುಸಬೇಕಾದ ಪೊಲೀಸ್ ಇಲಾಖೆ ಪ್ರಾರ್ಥನೆ ನಡೆಸದಂತೆ ತಡೆ ಹಿಡಿಯುತ್ತಿರುವುದು ದುರಂತ ಎಂದು ಕ್ರೈಸ್ತ ಸಮುದಾಯ ಆರೋಪಿಸಿದೆ.

ಈ ಮಧ್ಯೆ ಬಿಷಪ್ ಮತ್ತು ಕ್ರೈಸ್ತ ನಾಯಕರ ನಿಯೋಗವೊಂದು ಬೆಳಗಾವಿ ಪೊಲೀಸ್ ಭೇಟಿಯಾಗಿ ಕ್ರಿಶ್ಚಿಯನ್ ಸಮುದಾಯಕ್ಕೆ ರಕ್ಷಣೆ ಒದಗಿಸುವಂತೆ ಮನವಿ ಮಾಡಿದೆ.

Join Whatsapp