ಬೆಂಗಳೂರಿನಲ್ಲಿ ಮಾ. 11 ರಿಂದ 13 ರ ವರೆಗೆ ಮಹಿಳಾ ಆಭರಣ ಪ್ರದರ್ಶನ ಮೇಳ

Prasthutha|

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನದ ಸಂಭ್ರಮ ಮುಗಿದು ವಾರ ಕಳೆಯುವುದರೊಳಗಾಗಿ ಥ್ರಡ್ಸ್ ಆಫ್ ಗೋಲ್ಡ್ – ದಿ ಬೆಂಗಳೂರು ಜುವೆಲ್ಲರಿ ಶೋ” ಮಹಿಳಾ ಸಮೂಹವನ್ನು ಸೆಳೆಯಲು ಸಜ್ಜಾಗಿದೆ. ಆಭರಣ ವ್ಯಾಪಾರಿಗಳ ಅತಿದೊಡ್ಡ ಪ್ರದರ್ಶನಗಳಲ್ಲಿ ಈ ಪ್ರದರ್ಶನಕ್ಕೆ ಮಹತ್ವದ ಸ್ಥಾನವಿದೆ.  ಜಕ್ಕೂರಿನ ಪ್ಲೇಯಿಂಗ್ ಕ್ಲಬ್ ಎದುರು, ಅಮರಾ ಕನ್ವೆಷನ್ ಸೆಂಟರ್ ನಲ್ಲಿ ಮಾರ್ಚ್ 11 ರಿಂದ 13 ರ ವರೆಗೆ ನಡೆಯಲಿರುವ ಥ್ರಡ್ಸ್ ಆಫ್ ಗೋಲ್ಡ್ – ಚಿನ್ನದ ಎಳೆಗಳು ಎಂದೇ ಖ್ಯಾತಿ ಪಡೆದ ಈ ಪ್ರದರ್ಶನದಲ್ಲಿ 15 ಪ್ರಮುಖ ಆಭರಣ ವ್ಯಾಪಾರಿಗಳನ್ನು ಒಂದೇ ವೇದಿಕೆ ತರಲಾಗುತ್ತಿದೆ.

- Advertisement -

 “ದಿ ಬೆಂಗಳೂರು ಜುವೆಲ್ಲರಿ ಶೋ”ಗೆ ಪ್ರತಿಯೊಬ್ಬರನ್ನೂ ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ. 2019 ರ ನಂತರ ಬೆಂಗಳೂರಿನ ವಿವಿಧೆಡೆ ನಡೆದ ಆಭರಣ ಮೇಳಗಳಲ್ಲಿಯೇ ಇದು ಅತ್ಯಂತ ದೊಡ್ಡ ಪ್ರದರ್ಶನ ಎಂದು ಥ್ರೆಡ್ಸ್ ಆಫ್ ಗೋಲ್ಡ್ [ಜೆಬಿಜೆ ಎಂಟರ್ ಪೈಸಸ್] ನ ಸಂಸ್ಥಾಪಕರಾದ ಸಂಗೀತ ವಲೆಚಾ ತಿಳಿಸಿದ್ದಾರೆ.

“ಪ್ರತಿಯೊಬ್ಬರೂ ತಮ್ಮ ನೆಚ್ಚಿನ ಆಭರಣಗಳನ್ನು ಎದುರು ನೋಡಲು, ಸೊಗಸಾಗಿ ಶಾಪಿಂಗ್ ಮಾಡಲು ಇದು ಸದಾವಕಾಶವಾಗಿದ್ದು, ಪ್ರದರ್ಶನದ ಬಾಗಿಲುಗಳನ್ನು ತೆರೆಯಲು ಸಜ್ಜಾಗಿದ್ದೇವೆ” ಎಂದರು.   ವಿಶ್ವಾಸಾರ್ಹ ಆಭರಣ ಬ್ರ್ಯಾಂಡ್ ಗಳನ್ನು ಗ್ರಾಹಕರ ಸನಿಹಕ್ಕೆ ತರುವುದು ಬೆಂಗಳೂರು ಜುವೆಲ್ಲರಿ ಪ್ರದರ್ಶನದ ಉದ್ದೇಶವಾಗಿದೆ.

- Advertisement -

ಇದು ಆಭರಣ ಉತ್ಸಾಹಿಗಳಿಗೆ ತಮ್ಮ ನೆಚ್ಚಿನ ಆಭರಣಗಳನ್ನು ಒಂದೇ ಸೂರಿನಡಿ ಒದಗಿಸಲಾಗುತ್ತಿದೆ. ಆರಂಭದಿಂದಲೂ ಪ್ರದರ್ಶನ, ಪ್ರದರ್ಶಕರು ಮತ್ತು ಗ್ರಾಹಕರಿಂದ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಚಿನ್ನ, ವಜ್ರ, ಮದುವೆ ಆಭರಣಗಳು, ಪ್ರಾಚೀನ ಆಭರಣಗಳು, ಹೊಸ ವಿನ್ಯಾಸಗಳು, ಬೆಳ್ಳಿ, ರತ್ನದ ಕಲ್ಲುಗಳು ಮತ್ತು ಮಣಿ ಆಭರಣಗಳನ್ನು ಪ್ರದರ್ಶಕರು ಪ್ರದರ್ಶಿಸುತ್ತಿದ್ದಾರೆ. ಅಭುಷಣ್, ಎವಿಆರ್ ಸ್ವರ್ಣ ಮಹಲ್, ಶ್ರೀ ಗಣೇಶ್ ಡೈಮಂಡ್ಸ್ ಅಂಡ್ ಜುವೆಲ್ಲರಿ – ರಾಜಾಜಿನಗರ, ನವರತನ್, ಗಜ್ರಾಜ್ ಜುವೆಲ್ಲರಿ, ನಿರ್ಮಲ್ ಜುವೆಲ್ಲರಿ, ವಂಡರ್ ಡೈಮಂಡ್ಸ್, ಸಿಂಹ ಜುವೆಲ್ಲರ್ಸ್, ಸಂಚಿ ಸಿಲ್ವರ್ ಟ್ರೆಂಡ್ಸ್, ನಿತ್ಯಾಸ್, ಸ್ರಸ್ತ ಕಲೆಕ್ಷನ್ಸ್ ಆಭರಣ ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ. ಲ್ಯಾಬ್ ಗ್ರೌನ್ ಡೈಮಂಡ್ಸ್ ನಿಮಗೆ ವಂಡರ್ ಡೈಮಂಡ್ಸ್ ಗಳನ್ನು ಪ್ರಸ್ತುತಪಡಿಸುತ್ತಿದೆ. ನವರತನ್ ಆಭರಣ ಸಂಸ್ಥೆ ಮುಂಬರುವ ಮದುವೆ ಸಮಾರಂಭಗಳಿಗಾಗಿ ವಧುವಿನ ವ್ಯಾಪಕ ಶ್ರೇಣಿಯ ಸಂಗ್ರಹವನ್ನು ಅನಾವರಣಗೊಳಿಸಲಿದೆ.  ವಿಶೇಷವೆಂದರೆ

ಈ ಆಭರಣ ಮೇಳವನ್ನು ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಅಪಾರ ಕೊಡುಗೆ ನೀಡಿದ ಅಪಲೋ ಆಸ್ಪತ್ರೆಯ ವೈದ್ಯರು ಉದ್ಘಾಟಿಸಲಿದ್ದಾರೆ. ಕೋವಿಡ್ ಸೇನಾನಿಗಳಾಗಿ ಸೇವೆ ಸಲ್ಲಿಸಿದ ಅಪಲೋ ಆಸ್ಪತ್ರೆಯ ಆಂತರಿಕ ಔಷಧ ವಿಭಾಗದ ಹಿರಿಯ ಸಮಾಲೋಚಕರಾದ ಡಾ. ಶೀತಲ್ ಕಾಮತ್, ಆಂತರಿಕ ಔಷಧ ವಿಭಾಗದ ವೈದ್ಯರಾದ ಡಾ. ಸುಶೀಲಾ ಸುರೇಶ್, ಚರ್ಮರೋಗ ತಜ್ಞರಾದ ಡಾ. ಶೋಭಾ, ಮನೋವೈದ್ಯರಾದ ಡಾ. ಶೋಭಾ ಕೃಷ್ಣ ಅವರು ಆಭರಣ ಮೇಳವನ್ನು ಶುಭಾರಂಭ ಮಾಡಲಿದ್ದಾರೆ.  ಪ್ರತಿ ದಿನ ಲಕ್ಕಿ ಡ್ರಾ ಇರಲಿದ್ದು, ಮೇಳಕ್ಕೆ ಭೇಟಿ ನೀಡಿದ ಅದೃಷ್ಟಶಾಲಿಯೊಬ್ಬರು ವಜ್ರದ ಪೆಂಡೆಂಟ್ ಗೆಲ್ಲುವ ಅವಕಾಶವಿದೆ. ಡಿ.ಆರ್.ಎನ್ ಜುವೆಲ್ಲರ್ಸ್ ಅದೃಷ್ಟಶಾಲಿಗಳಿಗೆ ಬಹುಮಾನ ಪ್ರಯೋಜಕತ್ವ ವಹಿಸುತ್ತಿದೆ. 

Join Whatsapp