ಕರಾಚಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ವ್ಯಾಪಾರ, ದ್ವಿಪಕ್ಷೀಯ ಸಂಬಂಧ, ಪ್ರಯಾಣದ ಸಂಪೂರ್ಣ ಸ್ಥಗಿತದ ಹೊರತಾಗಿಯೂ ಹಿಂದೂ, ಮುಸ್ಲಿಮ್ ಮತ್ತು ಸಿಖ್ ಯಾತ್ರಾರ್ಥಿಗಳ ಪ್ರಯಾಣಕ್ಕೆ ನೆರವಾಗುವ ನಿಟ್ಟಿನಲ್ಲಿ ಪಾಕಿಸ್ತಾನ ಹಿಂದೂ ಕೌನ್ಸಿಲ್ ನ ನೂತನ ಪ್ರಸ್ತಾವನೆಯನ್ನು ಪಾಕಿಸ್ತಾನಕ್ಕೆ ಸರ್ಕಾರ ರವಾನಿಸಿದೆ.
ಪಾಕಿಸ್ತಾನ ಹಿಂದೂ ಕೌನ್ಸಿಲ್ (ಪಿ.ಎಚ್.ಸಿ) ಪ್ರಧಾನ ಪೋಷಕ ರಮೇಶ್ ವಂಕ್ವಾನಿ ಪರವಾಗಿ ದೆಹಲಿಯಲ್ಲಿರುವ ಪಾಕಿಸ್ತಾನ ರಾಯಬಾರಿ ಕಚೇರಿಯಿಂದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪ್ರಸ್ತಾವನೆಯೊಂದನ್ನು ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್ ಲೈನ್ಸ್ (ಪಿ.ಐ.ಎ) ನೊಂದಿಗೆ ಮಾತುಕತೆ ನಡೆಸಿ ಎರಡು ಚಾರ್ಟರ್ಡ್ ವಿಮಾನಗಳಿಗೆ ಬೇಡಿಕೆ ಇಟ್ಟಿದೆ. ಮುಂದಿನ ಶನಿವಾರದಂದು ಲಾಹೋರ್ ಮತ್ತು ಕರಾಚಿಯಿಂದ ಭಾರತದ ಸ್ಥಳಗಳಿಗೆ ಯಾತ್ರಾರ್ಥಿಗಳನ್ನು ಕೊಂಡ್ಯೊಯ್ಯಲು ಅನುಮತಿಸಲಾಗಿದೆ ಎಂದು ಹೇಳಲಾಗಿದೆ.
ಈ ಮಧ್ಯೆ ಪಾಕಿಸ್ತಾನದ ಈ ನೂತನ ಪ್ರಸ್ತಾಪಕ್ಕೆ ನವದೆಹಲಿಯಲ್ಲಿ ಇನ್ನಷ್ಟೇ ಅನುಮತಿ ಪಡೆಯಬೇಕಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಅನುಮತಿ ಸಾಧ್ಯವೇ ಅಥವಾ ಇಲ್ಲವೇ ಎಂಬುದರ ಕುರಿತು ವಿಚಾರಣೆಗೆ MEA ಪ್ರತಿಕ್ರಿಯಿಸಲಿಲ್ಲ. ನಾಗರಿಕ ವಿಮಾನಯಾನ ಪ್ರಾಧಿಕಾರದ (ಡಿ.ಜಿ.ಸಿ.ಎ) ಹಿರಿಯ ಅಧಿಕಾರಿಯೊಬ್ಬರು ಈ ಕುರಿತು ಪ್ರತಿಕ್ರಿಯಿಸುತ್ತಾ, ಸದ್ಯ ವಿಮಾನಯಾನ ಸಂಸ್ಥೆಯಿಂದ ಯಾವುದೇ ಮನವಿ ಸ್ವೀಕರಿಸಿಲ್ಲ ಎಂದು ಹೇಳಿದರು.