ಇಮ್ರಾನ್‍ಖಾನ್ ಪತ್ನಿ ಬುಷ್ರಾ ಬೀಬಿ 2023ರ ಗಲಭೆಗೆ ಸಂಬಂಧಿಸಿದ 12 ಪ್ರಕರಣಗಳಿಂದ ಖುಲಾಸೆ

Prasthutha|

ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಪತ್ನಿ ಬುಷ್ರಾ ಬೀಬಿಗೆ ಬಿಗ್ ರಿಲೀಫ್ ದೊರೆತಿದ್ದು, ಅವರನ್ನು 2023ರ ಗಲಭೆಗೆ ಸಂಬಂಧಿಸಿದ 12 ಪ್ರಕರಣಗಳಲ್ಲಿ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.

- Advertisement -

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಕಳೆದ ವರ್ಷ ಇಮ್ರಾನ್‍ಖಾನ್‍ರನ್ನು ಇಸ್ಲಾಮಾಬಾದ್‍ನಲ್ಲಿ ಪೊಲೀಸರು ಬಂಧಿಸಿದ ಬಳಿಕ ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್‌ನ ಬೆಂಬಲಿಗರು ಸೇನೆಯ ಪ್ರಧಾನ ಕಚೇರಿ ಸೇರಿದಂತೆ ಹಲವು ಸರಕಾರಿ ಸಂಸ್ಥೆಗಳ ಕಚೇರಿ ಮೇಲೆ ದಾಳಿ ನಡೆಸಿದ್ದರು.ಇದಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಇಮ್ರಾನ್‍ಖಾನ್ ಮತ್ತು ಅವರ ಪತ್ನಿಯ ಮೇಲೆ ಪ್ರಕರಣ ದಾಖಲಾಗಿತ್ತು.

ಬುಷ್ರಾ ಬೀಬಿಯ ವಿರುದ್ಧ ದಾಖಲಾಗಿದ್ದ 12 ಪ್ರಕರಣಗಳ ವಿಚಾರಣೆಗೆ ಅವರ ಖುದ್ದು ಹಾಜರಾತಿ ಕೋರಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ನಡೆಸಿದ ಅಡಿಯಾಲಾ ಜೈಲಿನ ವಿಶೇಷ ನ್ಯಾಯಾಲಯ, ಪೊಲೀಸರ ಮನವಿಯನ್ನು ತಿರಸ್ಕರಿಸಿದೆ. ಅಲ್ಲದೆ, ಬುಷ್ರಾ ಬೀಬಿಯನ್ನು ಎಲ್ಲಾ 12 ಪ್ರಕರಣಗಳಿಂದಲೂ ಖುಲಾಸೆಗೊಳಿಸಿರುವುದಾಗಿ ಅವರ ವಕೀಲರು ಹೇಳಿದ್ದಾರೆ.



Join Whatsapp