ಬೇಹುಗಾರಿಕೆ ವಿವಾದದ ಕುರಿತು ಆಪಲ್ ಮಹತ್ವದ ಹೇಳಿಕೆ

Prasthutha|

- Advertisement -

ನವದೆಹಲಿ : ವಿರೋಧ ಪಕ್ಷದ ಸಂಸದರ ಫೋನ್‌ಗಳ ಮೇಲೆ ಬೇಹುಗಾರಿಕೆ ಆರೋಪದ ಕುರಿತು ಆಪಲ್ ಪ್ರತಿಕ್ರಿಯೆ ನೀಡಿದೆ. ಇಂತಹ ಎಚ್ಚರಿಕೆಯನ್ನು ಹೇಗೆ ನೀಡಲಾಗಿದೆ ಎಂಬುದು ನಮಗೆ ತಿಳಿದಿಲ್ಲ‌. ಇದು ಸುಳ್ಳು ಎಚ್ಚರಿಕೆ ಇರಬಹುದು. ಆಪಲ್ ಈ ಎಚ್ಚರಿಕೆಯ ಜವಾಬ್ದಾರಿಯನ್ನು ಯಾವುದೇ ವಿಶೇಷ ಸಂಸ್ಥೆ ಅಥವಾ ಸರ್ಕಾರಿ ಬೆಂಬಲಿತ ಹ್ಯಾಕರ್‌ಗಳಿಗೆ ನೀಡುವುದಿಲ್ಲ ಎಂದು ಆಪಲ್ ಹೇಳಿದೆ.

‘ಸರ್ಕಾರದಿಂದ ಬೆಂಬಲಿತವಾಗಿರುವ ಹ್ಯಾಕರ್‌’ಗಳು ವಿಶೇಷ ತಂತ್ರಜ್ಞಾನ ಮತ್ತು ಆರ್ಥಿಕ ಬೆಂಬಲವನ್ನು ಹೊಂದಿದ್ದಾರೆ ಮತ್ತು ಅವರು ಪ್ರತಿ ಬಾರಿಯೂ ತಮ್ಮ ಕೆಲಸವನ್ನು ವಿಶೇಷ ರೀತಿಯಲ್ಲಿ ನಿರ್ವಹಿಸುತ್ತಾರೆ. ಇಂತಹ ದಾಳಿಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು, ನಾವು ಅನೇಕ ಗುಪ್ತಚರ ಸಂಕೇತಗಳನ್ನ ಅವಲಂಬಿಸಬೇಕಾಗಿದೆ. ಈ ಸಂಕೇತಗಳು ಕೆಲವೊಮ್ಮೆ ಅಪೂರ್ಣವಾಗಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ ನಾವು ಕಳುಹಿಸುವ ಎಚ್ಚರಿಕೆಗಳು ಸುಳ್ಳಾಗಿರಬಹುದು. ಇದನ್ನು ಮಾಡುವ ಮೂಲಕ ನಾವು ಭವಿಷ್ಯದಲ್ಲಿ ಇಂತಹ ಸವಾಲುಗಳಿಗೆ ನಮ್ಮನ್ನು ಸಿದ್ಧಪಡಿಸಲು ಬಯಸುತ್ತೇವೆ. ಈ ಬಾರಿ ನಾವು ಈ ಎಚ್ಚರಿಕೆಯನ್ನು ಏಕೆ ಕಳುಹಿಸಿದ್ದೇವೆ ಅನ್ನೋದನ್ನು ಕಂಡುಹಿಡಿಯುತ್ತಿದ್ದೇವೆ ಎಂದು ಆಪಲ್ ಹೇಳಿದೆ.

Join Whatsapp