ಸಕ್ಕರೆ ಸಚಿವರ ಮಹತ್ವದ ಸಭೆ: ಸಮಿತಿ ರಚನೆ

Prasthutha|

- Advertisement -

ಬೆಂಗಳೂರು:  ಕಬ್ಬು ಇಲಾಖೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಕ್ಕರೆ ನಿಯಂತ್ರಣ ಮಂಡಳಿ, ರೈತ ಹೋರಾಟಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರನ್ನು (ಸರ್ಕಾರಿ ಹಾಗೂ ಖಾಸಗಿ) ಒಟ್ಟುಗೂಡಿಸಿ ಮಾನ್ಯ ಸಕ್ಕರೆ ಸಚಿವ ಶಂಕರ್ ಪಾಟೀಲ್ ಬಿ. ಮುನೇನಕೊಪ್ಪ ಅವರು ಕಬ್ಬು ಬೆಳೆಗಾರರ ರೇಟ್ ಚಾರ್ಜ್ ಬಗ್ಗೆ ಇಂದು ವಿಕಾಸಸೌಧದಲ್ಲಿ ಸಭೆ ನಡೆಸಿದರು.

ಕಬ್ಬು ಕಟಾವು ದರ ಹೆಚ್ಚಳ ಬಗ್ಗೆ, ಎಫ್ ಆರ್ ಪಿ ಹೆಚ್ಚಿಸಬೇಕು ಎನ್ನುವ ಬಗ್ಗೆ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

- Advertisement -

ಬಳಿಕ, ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಪ್ರಕಾರ ಸಮಿತಿಯೊಂದನ್ನು ರಚಿಸಲಾಯಿತು. ಈ ಸಮಿತಿಯು ಕೈಗೊಳ್ಳುವ ನಿರ್ಣಯಗಳಿಗೆ ಬದ್ಧರಾಗಿ ಇರುವುದಾಗಿ ವಿವಿಧ ಸಂಘ, ಕಬ್ಬು ಬೆಳೆಗಾರರು ಒಪ್ಪಿಕೊಂಡಿದ್ದಾರೆ.

ಸಮಿತಿಯು ಸಕ್ಕರೆ ಹಾಗೂ ಸಕ್ಕರೆ ಸಹ ಉತ್ಪನ್ನಗಳ ದರವನ್ನು ಹೆಚ್ಚಿಸಿ, ರೈತರು ಲಾಭವನ್ನು ಹಂಚಿಕೊಳ್ಳಬೇಕು ಎಂಬ ಸಂಬಂಧ ವೈಜ್ಞಾನಿಕ ಅಧ್ಯಯನ ನಡೆಸಿ ಇನ್ನು ಒಂದು ವಾರದೊಳಗೆ ವರದಿ ಸಲ್ಲಿಸಲಿದೆ. ಆ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ, ಕೂಡಲೇ ಒಂದು ನಿರ್ಣಯವನ್ನು ಘೋಷಣೆ ಮಾಡಲಾಗುವುದು ಎಂದು ನಿರ್ಣಯ ಕೈಗೊಳ್ಳಲಾಯಿತು. 

 ಸರ್ಕಾರ ರೈತರ ಪರವಾಗಿದೆ

ಸಕ್ಕರೆ ಸಚಿವರು ಮಾತನಾಡಿ, “ದೇಶದಲ್ಲಿಯೇ ಕಬ್ಬು ಬೆಳೆಗಾರರಿಗೆ 100% ಪಾವತಿಯನ್ನು ಮಾಡುತ್ತಿರುವ ರಾಜ್ಯ ಕರ್ನಾಟಕ. ರೈತರು ಪಾವತಿ ಸಂಬಂಧವಾಗಿ ರಸ್ತೆಗಿಳಿಯದಂತೆ ಸತತ ಎರಡು ವರ್ಷಗಳಿಂದಲೂ ಸರ್ಕಾರ ಕ್ರಮ ವಹಿಸಿದೆ. ಈಗ ರೈತರು ಕೇಳುತ್ತಿರುವಂತೆ ಎಫ್ ಆರ್ ಪಿ ದರಕ್ಕಿಂತಲೂ ಹೆಚ್ಚು ಮೊತ್ತವನ್ನು ಕೊಡಿಸಲು ಸರ್ಕಾರ ಶ್ರಮಿಸುತ್ತಿದೆ. ಕಾರ್ಖಾನೆ ಮಾಲೀಕರಿಗೂ ತೊಂದರೆಯಾಗದ ರೀತಿಯಲ್ಲಿ ರೈತರಿಗೂ ಹಿತ ಎನಿಸುವಂತೆ ಒಂದು ನಿರ್ಣಯವನ್ನು ಕೈಗೊಳ್ಳಲಾಗುವುದು. ರೈತರು ಸಹಕರಿಸಬೇಕು. ಸರ್ಕಾರ ರೈತರ ಪರವಾಗಿದೆ. ರೈತರ ಪರವಾಗಿಯೇ ನಿರ್ಣಯ ಕೈಗೊಳ್ಳಲಾಗುವುದು. ಕಾದು ನೋಡಿ” ಎಂದು ರೈತರ ಬಳಿ ಮನವಿ ಮಾಡಿದರು.

 ಸಮಿತಿಯ ಸದಸ್ಯರ ವಿವರ

ಶ್ರೀ ಶಿವಾನಂದ ಹೆಚ್ ಕಲಕೇರಿ, ಆಯುಕ್ತರು ಕಬ್ಬು

ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು

 ಅಧ್ಯಕ್ಷ ರು

ಡಾ|| ಎಂ.ಬಿ.ಲೋಂಡ ಸಲಹೆಗಾರರು, ಎಸ್. ನಿಜಲಿಂಗಪ್ಪ, ಸಕ್ಕರೆ ಸಂಖ್ಯೆ, ಬೆಳಗಾವಿ ಹಾಗೂ ಸಕ್ಕರೆ ತಜ್ಞರು – ಸದಸ್ಯರು

ಡಾ|| ಗೋವಿಂದ ಮಿಸಾಲೆ, ಉಪಾಧ್ಯಕ್ಷರು, (ಮದ್ಯಸಾರ), ರೇಣುಕಾ ಶುಗರ್ ಲಿ., ಬೆಳಗಾವಿ  – ಸದಸ್ಯರು

ಶ್ರೀ ಪ್ರವೀಣ್ ಘಾಳಿ, ಚಾರ್ಟ‌ರ್ ಅಕೌಂಟೆಂಟ್,

ಮೆ|| ಘಾಳಿ ಅಂಡ್ ಕಂಪನಿ, ಬೆಳಗಾವಿ – ಸದಸ್ಯರು

ಡಾ|| ಆರ್.ಬಿ. ಖಾಂಡಗಾವ ನಿರ್ದೇಶಕರು,

ಎಸ್‌. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ – ಸದಸ್ಯ ಕಾರ್ಯದರ್ಶಿ



Join Whatsapp