ಮಡಿಕೇರಿ: ‘ಪಶ್ಚಿಮಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಯನ್ನು ವಿರೋಧಿಸುವುದು ಸರಿಯಲ್ಲ’ ಎಂದು ಪರಿಸರ ಮತ್ತು ಆರೋಗ್ಯ ಫೌಂಡೇಷನ್‌ನ ಕಾರ್ಯದರ್ಶಿ ಕರ್ನಲ್ ಸಿ.ಪಿ.ಮುತ್ತಣ್ಣ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಕಾರಾತ್ಮಕ ಅಂಶಗಳನ್ನು ತೆಗೆದು ಸಕಾರಾತ್ಮಕ ಅಂಶಗಳನ್ನು ಉಳಿಸಿಕೊಂಡು ಅಧಿಸೂಚನೆ ಜಾರಿಗೊಳಿಸಬೇಕು ಎಂದು ಹೇಳಿದರು.
‘ಪರಿಸರ ಉಳಿಯಬೇಕಾದರೆ ಕಸ್ತೂರಿ ರಂಗನ್ ವರದಿ ಜಾರಿಗೆ ಬರಲೇಬೇಕು. ರೈತರೇ ಬೆಳೆಸಿರುವ ಮರಗಳಿಗೆ ನಿಗದಿತ ಸಹಾಯಧನ ಕೊಡಬೇಕು ಎಂದು ವರದಿಯಲ್ಲಿದೆ. ಈ ಅಂಶ ಕರಡು ಅಧಿಸೂಚನೆಯಲ್ಲಿ ಇಲ್ಲ. ಜಿಲ್ಲೆಯ ಬೆಳೆಗಾರರಿಗೆ ಅನುಕೂಲವಾಗುವಂತಹ ಅಂಶಗಳನ್ನು ಸೇರಿಸಿ ಅಧಿಸೂಚನೆಯನ್ನು ಜಾರಿಗೆ ತರಬೇಕು’ ಎಂದು ಅವರು ಆಗ್ರಹಿಸಿದರು.