‘ನನ್ನ ಮಾನ ಹಾನಿ ಮಾಡುವ ಪೋಸ್ಟ್ ಕೂಡಲೇ ಡಿಲೀಟ್ ಮಾಡಿ’: ಸಿಟಿ ರವಿ ವಾರ್ನಿಂಗ್

Prasthutha|

ಬೆಂಗಳೂರು: ತನ್ನ ವಿರುದ್ಧ ಕಾಂಗ್ರೆಸ್ ಎಡಿಟ್ ಮಾಡಿದ ಪೋಸ್ಟರ್‌ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮಾಜಿ ಶಾಸಕ ಸಿ ಟಿ ರವಿ, ನನ್ನ ಮಾನ ಹಾನಿ ಮಾಡುವ ಪೋಸ್ಟ್ ಅನ್ನು ಕೂಡಲೇ ಡಿಲೀಟ್ ಮಾಡಿ ಕ್ಷಮೆಯಾಚಿಸಿ, ಇಲ್ಲವಾದರೆ ನಿಮ್ಮ ಮೇಲೆ ನಾನು ಕಾನೂನು ಕ್ರಮ ಕೈಗೊಳ್ಳುವುದು ಖಚಿತ ಎಂದು ಆಕ್ರೋಶ ಹೊರ ಹಾಕಿದ್ದಾರೆ.

- Advertisement -

‘ನಾನು ಕರಸೇವಕ, ನನ್ನನ್ನೂ ಬಂಧಿಸಿ’ ಎಂಬ ಬಿಜೆಪಿಯ ಅಭಿಯಾನವನ್ನು ಟೀಕಿಸಿದ್ದ ಕಾಂಗ್ರೆಸ್, ಸಿ ಟಿ ರವಿ ಅವರ ಅಸಲಿ ಚಿತ್ರವನ್ನು ಎಡಿಟ್ ಮಾಡಿ ‘ನಾನು ಕಾರು ಚಲಾಯಿಸಿ ಇಬ್ಬರ ಹತ್ಯೆ ಮಾಡಿದ್ದೇನೆ. ನನ್ನನ್ನೂ ಬಂಧಿಸಿ’ ಎಂಬ ಪೋಸ್ಟರ್ X ಮಾಡಿತ್ತು.

ಇದಕ್ಕೆ ಕೆಂಡಾಮಂಡಲವಾದ ಸಿಟಿ ರವಿ, ಕಾಂಗ್ರೆಸ್ಸಿಗರೇ ಇದು ನಿಮ್ಮ ಹತಾಶೆಯ ಪರಮಾವಧಿ. ನಾನು ಪ್ರಯಾಣಿಸುತಿದ್ದ ಕಾರು ಅಪಘಾತವಾಗಿದ್ದು ನಿಮ್ಮ ಸರಕಾರ ಅಧಿಕಾರದಲ್ಲಿ ಇದ್ದಾಗ. ಅಂದೇ ನಿಮ್ಮ ನಾಯಕರೆಲ್ಲ ಪೋಲೀಸರ ಮೇಲೆ ಒತ್ತಡ ಹೇರಿ ಚಿಕ್ಕಮಗಳೂರು – ಬೆಂಗಳೂರು ಹೆದ್ದಾರಿಯಲ್ಲಿನ ಎಲ್ಲಾ ಟೋಲ್ ಗಳಲ್ಲಿರುವ ಸಿಸಿಟಿವಿ ಫೂಟೇಜ್ ಪರಿಶೀಲಿಸಿ ಯಾರು ಕಾರು ಚಾಲನೆ ಮಾಡುತ್ತಿದ್ದರು ಎಂಬುದನ್ನು ಪರಿಶೀಲನೆ ನಡೆಸಿ ನನ್ನ ಚಾಲಕ ಕಾರನ್ನು ಚಲಾಯಿಸುತ್ತಿರುವುದನ್ನು ಖಚಿತಪಡಿಸಿಕೊಂಡಿದ್ದರು ಎಂದು ಹೇಳಿದ್ದಾರೆ.

- Advertisement -

ಅಲ್ಲದೆ, ಅಂದು ನನ್ನ ಮೇಲೆ ಕೇಸು ದಾಖಲಾಗಲಿಲ್ಲ. ಆದರೆ ಈಗ ನನ್ನ ಮೇಲೆ ಸುಳ್ಳು ಆರೋಪ ಮಾಡುವ, ನನ್ನ ಮಾನ ಹಾನಿ ಮಾಡುವ ಈ ಪೋಸ್ಟ್ ಕೂಡಲೇ ಡಿಲೀಟ್ ಮಾಡಿ ಕ್ಷಮೆಯಾಚಿಸಿ, ಇಲ್ಲವಾದರೆ ನಿಮ್ಮ ಮೇಲೆ ನಾನು ಕಾನೂನು ಕ್ರಮ ಕೈಗೊಳ್ಳುವುದು ಖಚಿತ ಎಂದು X ಮಾಡಿದ್ದಾರೆ.



Join Whatsapp