ನನ್ನ ಹೆಸರು ಲೈಫ್ ಮಿಷನ್ ಪ್ರಕರಣದಲ್ಲಿ ಕೇಳಿ ಬಂದಿರುವುದಕ್ಕೆ ಚಿಂತಿತನಾಗಿಲ್ಲ: ಬಿಲಿಯನೇರ್ ಯೂಸುಫ್ ಅಲಿ

Prasthutha|

ತಿರುವನಂತಪುರ: ಲೈಫ್ ಮಿಶನ್ ಪ್ರಕರಣದಲ್ಲಿ ತನ್ನ ಹೆಸರು ಚರ್ಚೆಯಾಗುತ್ತಿರುವುದರ ಬಗ್ಗೆ ಮಂಗಳವಾರ ಯುಎಇ ಅನಿವಾಸಿ ಬಿಲಿಯನೇರ್ ಉದ್ಯಮಿ ಎಂ. ಎ. ಯೂಸುಫ್ ಅಲಿ ತಮ್ಮ ಮೌನ ಮುರಿದಿದ್ದಾರೆ.

- Advertisement -


“ಸಮಾಜದ ಬಡ ಮತ್ತು ದುರ್ಬಲ ವರ್ಗದವರಿಗೆ ಯಾರಾದರೂ ಏನಾದರೂ ಮಾಡಿದಾಗ ಆ ಬಗ್ಗೆ ಮಾತು ಬರುವುದು ಸಾಮಾನ್ಯ ವಿಷಯ. ನನ್ನ ಹೆಸರು ಈ ಪ್ರಕರಣದಲ್ಲಿ ಕೇಳಿ ಬಂದರೆ ನಾನು ಬಗ್ಗೆ ಚಿಂತಿತನಾಗಿಲ್ಲ” ಎಂದು ಯೂಸುಫ್ ಅಲಿ ಪ್ರತಿಕ್ರಿಯಿಸಿದ್ದಾರೆ.


ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಒಂದು ಕಾಲದ ಮುಖ್ಯ ಕಾರ್ಯದರ್ಶಿ ಶಿವಶಂಕರ್ ಜೊತೆ ಮತ್ತೋರ್ವ ಆರೋಪಿ ಸ್ವಪ್ನ ಸುರೇಶ್ ನಡೆಸಿರುವ ಮೆಸೇಜುಗಳಲ್ಲಿ ಯೂಸುಫ್ ಅಲಿ ಹೆಸರು ಇರುವುದಾಗಿ ಹೇಳಲಾಗಿದೆ.

- Advertisement -


ಸಮಾಜದ ದುರ್ಬಲ ವರ್ಗದವರಿಗಾಗಿ ಮನೆ ನೀಡುವ ಲೈಫ್ ಮಿಶನ್ ಎಂಬ ಫ್ಲಾಟ್ ನಿರ್ಮಾಣ ಯೋಜನೆಯಲ್ಲಿ ಅಲಿಯವರ ಹೆಸರು ಇದೆ.
ಈ ಯೋಜನೆಗೆ ಯುಎಇ ಮೂಲದ ರೆಡ್ ಕ್ರೆಸೆಂಟ್ ಸಂಸ್ಥೆಯಿಂದ ನಿಧಿ ಬರುತ್ತಿದ್ದು, ಇದರಲ್ಲಿ ಭಾರೀ ಕಮಿಷನ್ ವ್ಯವಹಾರವಿದೆ ಎನ್ನುವುದು ಸ್ವಪ್ನ ಸುರೇಶ್ ಮೆಸೇಜ್’ನಲ್ಲಿರುವ ಪ್ರಮುಖ ಅಂಶ ಎನ್ನಲಾಗಿದೆ. ಜಾರಿ ನಿರ್ದೇಶನಾಲಯದವರು ಸಂತೋಷ್ ಏಪನ್ ಎಂಬ ಬಿಲ್ಡರನ್ನು ಬಂಧಿಸಿದ ಬೆನ್ನಿಗೆ ಸ್ವಪ್ನ ಈ ಆರೋಪ ಮಾಡಿದ್ದಾಳೆ.


ಈ ಯೋಜನೆಯ ಚರ್ಚೆಯಲ್ಲಿ ಯೂಸುಫ್ ಅಲಿ ಭಾಗಿಯಾಗಿದ್ದರು ಎನ್ನುವುದು ಅವರ ಹೆಸರು ಕೂಡ ಕೇಳಿ ಬರಲು ಕಾರಣ ಎನ್ನಲಾಗಿದೆ.
ಯೂಸುಫ್ ಅಲಿಯವರನ್ನು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿರುವುದಾಗಿ ವರದಿಯಾಗಿದೆ. ಆ ಬಗ್ಗೆ ಅಲಿಯವರು ಅದನ್ನು ಯಾರು ವರದಿ ಮಾಡಿದರೋ ಅವರನ್ನೇ ಕೇಳಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Join Whatsapp