ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾರೆ.
ಬಂಗಾರ್ ಅವರ ಪುತ್ರ ಇತ್ತೀಚೆಗೆ ಹಾರ್ಮೋನ್ ರಿಪ್ಲೇಸ್ ಮೆಂಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ತನ್ನ ಗುರುತನ್ನು ‘ಟ್ರಾನ್ಸ್ ಪರ್ಸನ್’ ಎಂದು ಬಹಿರಂಗಪಡಿಸಿದ್ದಾರೆ.
ಇನ್ ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಆರ್ಯನ್, “ಕ್ರಿಕೆಟ್ ಆಡುವ ನನ್ನ ಕನಸು ನನಸಾಗಿಸಲು ಅನೇಕ ತ್ಯಾಗಗಳನ್ನು ಮಾಡಿದ್ದೇನೆ. ಆದರೆ ಆಟದ ಹೊರತಾಗಿ, ನನ್ನ ಸ್ವಂತ ವಿಷಯಕ್ಕೆ ಸಂಬಂಧಿಸಿದ ಪ್ರಯಾಣವೂ ಇದೆ. ನನ್ನೀ ಪಯಣ ಸುಲಭವಾಗಿರಲಿಲ್ಲ. ಆದರೆ, ಇದರಲ್ಲಿ ಗಳಿಸಿದ ಗೆಲುವು ನನಗೆ ಎಲ್ಲಕ್ಕಿಂತ ದೊಡ್ಡದು. ಇದು ಪರಿಶ್ರಮ ಮತ್ತು ಅಚಲ ಸಮರ್ಪಣೆಯಿಂದ ತುಂಬಿದ ಪ್ರಯಾಣ. ಇತರರನ್ನು ಎದುರಿಸಲು ಪ್ರತಿ ಹೆಜ್ಜೆಯಲ್ಲೂ ನನಗೆ ಶಕ್ತಿ ಬೇಕಿತ್ತು” ಎಂದಿದ್ದಾರೆ.
ಶಸ್ತ್ರಚಿಕಿತ್ಸೆಯ 10 ತಿಂಗಳ ನಂತರ ತಮ್ಮ ಹೆಸರನ್ನು ಆರ್ಯನ್ ನಿಂದ ‘ಅನಯಾ’ ಎಂದು ಬದಲಾಯಿಸಿಕೊಂಡಿದ್ದಾರೆ. ಇದರೊಂದಿಗೆ ಹುಡುಗನಿಂದ ಹುಡುಗಿಯಾಗಿ ಬದಲಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.