ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ; ಆರೋಪಿಗಳ ಬಂಧನ

Prasthutha|

ಬೆಂಗಳೂರು: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದವರನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸದಸ್ಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಂಗಳೂರಿನ ಮುನೇಶ್ವರ ಬ್ಲಾಕ್ ಬಳಿ ನಡೆದಿದೆ.

- Advertisement -

“ಸರ್ಕಾರದ ವತಿಯಿಂದ ಬಿಪಿಎಲ್ ಕಾರ್ಡುದಾರರಿಗೆ ವಿತರಿಸಬೇಕಾಗಿದ್ದ ಅಕ್ಕಿಯನ್ನು ಖಾಸಗಿ ವ್ಯಕ್ತಿಗಳು ಅಕ್ಕಿ ಪಾಲಿಶ್ ಮಾಡುವ ಸಲುವಾಗಿ ನಾಗಮಂಗಲಕ್ಕೆ ಸಾಗಿಸಲು ಸರಕು ಸಾಗಾಣಿಕೆ ವಾಹನದಲ್ಲಿ ತುಂಬುತ್ತಿದ್ದ ವೇಳೆ ಶುಕ್ರವಾರ ಬೆಳಗ್ಗಿನ ಜಾವ 4:30ರ ಹೊತ್ತಿಗೆ ದಾಳಿ ಮಾಡಿ, ವಾಹನ ಸಮೇತ ಆರೋಪಿಗಳನ್ನುಬೆಂಗಳೂರಿನ ಗಿರಿನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾಗಿ”ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ” ತಂಡ ಮಾಧ್ಯಮಗಳಿಗೆ ತಿಳಿಸಿದೆ.

ಬೆಂಗಳೂರಿನ ಮುನೇಶ್ವರ ಬ್ಲಾಕ್ ಬಳಿ ಗೂಡ್ಸ್ ವಾಹನದಲ್ಲಿ ಬೆಳಗ್ಗಿನ ಜಾವ ಅಕ್ಕಿ ಲೋಡ್ ಮಾಡುತ್ತಿದ್ದ ವೇಳೆ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಬೆಂಗಳೂರು ನಗರದ ಕಾರ್ಯದರ್ಶಿ ಜೀವನ್ ನೇತೃತ್ವದ ತಂಡ ದಾಳಿ ನಡೆಸಿದಾಗ 5 ಕ್ವಿಂಟಾಲ್ ಅಕ್ಕಿ ಇರುವುದಾಗಿ ಚಾಲಕ ನಾಗರಾಜ್ ಹೇಳಿದ್ದಾನೆ.

- Advertisement -

ನಂತರ  ದೂರವಾಣಿ ಕರೆ ಮೂಲಕ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಅಕ್ಕಿ ಇರುವ ವಾಹನ, ಚಾಲಕ ಹಾಗೂ ಆತನೊಂದಿಗೆ ಇದ್ದ ಯುವಕನನ್ನು ವಶಕ್ಕೆ ಪಡೆದುಕೊಂಡು ದೂರು ದಾಖಲಿಸಿದ್ದಾರೆ.  ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಈ ಸಮಾಜಮುಖಿ ಕಾರ್ಯಕ್ಕೆ ನೆಟ್ಟಿಗರಿಂದಭಾರೀ ಶ್ಲಾಘನೆ ವ್ಯಕ್ತವಾಗಿದೆ.

Join Whatsapp