ಮಂಜೇಶ್ವರ : ವರ್ಕಾಡಿ ಪಂಚಾಯತ್ ವ್ಯಾಪ್ತಿಯ ಆನೆಕಲ್ಲು ಎಂಬಲ್ಲಿ ಗುಡ್ಡಗಳನ್ನು ಅಗೆದು ಮಣ್ಣನ್ನು ಸ್ಥಳಾಂತರ ಮಾಡುವುದನ್ನು ಅಧಿಕಾರಿಗಳು ಕಂಡೂ ಕಾಣದಂತೆ ನಟಿಸುತ್ತಿದ್ದಾರೆಂದು ಎಸ್.ಡಿ.ಪಿ.ಐ ಮಂಜೇಶ್ವರ ಮಂಡಲ ಸಮಿತಿ ಆರೋಪಿಸಿದೆ.
ಮಲೆನಾಡು ಪ್ರದೇಶವಾದ ಕರ್ನಾಟಕ – ಕೇರಳ ಗಡಿ ಪ್ರದೇಶವಾದ ಆನೆಕಲ್ಲು ಎಂಬಲ್ಲಿ ಹಲವಾರು ಮನೆಗಳಿರುವ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿಯ ನೆಪದಲ್ಲಿ ಗುಡ್ಡಗಳನ್ನು ಅಗೆದು ಮಣ್ಣು ಸ್ಥಳಾಂತರ ಮಾಡುವುರಿಂದ ದೊಡ್ಡ ಅಪಾಯವನ್ನು ತಂದೊಡ್ಡುವ ಭೀತಿ ಎದುರಾಗಿದೆ. ನಾಗರಿಕರ ವಿರೋಧದ ನಡುವೆಯೂ ಅಕ್ರಮವಾಗಿ ಅಧಿಕಾರಿಗಳನ್ನುಪಯೋಗಿಸಿ ದಿನ ನಿತ್ಯ ಮಣ್ಣು ಸಾಗಿಸಲಾಗುತ್ತಿದೆಯೆಂದು ನಾಗರಿಕರು ಆರೋಪಿಸುತ್ತಿದ್ದಾರೆ.
ಭವಿಷ್ಯದಲ್ಲಿ ಉಂಟಾಗಬಹುದಾದ ಬಹುದೊಡ್ಡ ದುರಂತವನ್ನು ಮನಗಂಡು ಗುಡ್ಡಗಳನ್ನು ಅಗೆದು ನೆಲಸಮ ಮಾಡುವುದನ್ನು ತಕ್ಷಣಕ್ಕೆ ನಿಲ್ಲಿಸಬೇಕು ಹಾಗೂ ಈ ಅಕ್ರಮ ಗುಡ್ಡ ಅಗೆಯುವುದಕ್ಕೆ ಬೆಂಬಲವಾಗಿ ನಿಲ್ಲುವ ಅಧಿಕಾರಿಗಳ ವಿರುದ್ದ ಪ್ರತಿಭಟನೆಯಂತಹ ಹೋರಾಟಗಳನ್ನು ಮಾಡುವುದಾಗಿ ನೇತಾರರು ಎಚ್ಚರಿಸಿದ್ದಾರೆ. ವನ ಪ್ರದೇಶದ ಹಾಗೂ ಹಾಗೂ ಅಲ್ಲಿನ ನಿವಾಸಿಗಳ ರಕ್ಷಣೆಗೆ ಬೇಕಾದ ಯೋಜನೆಗಳನ್ನು ರೂಪಿಸಲು ಅಧಿಕಾರಿಗಳು ಗಮನಹರಿಸಬೇಕೆಂದೂ ಎಸ್.ಡಿ.ಪಿ.ಐ ಆಗ್ರಹಿಸಿದೆ.
ಎಸ್.ಡಿ.ಪಿ.ಐ ಮಂಜೇಶ್ವರ ಮಂಡಲಾಧ್ಯಕ್ಷ ಅಶ್ರಫ್ ಬಡಾಜೆ ಅಧ್ಯಕ್ಷತೆ ವಹಿಸಿದ ಸಭೆಯಲ್ಲಿ ಉಪಾಧ್ಯಕ್ಷರುಗಳಾದ ಅನ್ವರ್ ಆರಿಕ್ಕಾಡಿ, ಶರೀಫ್ ಪಾವೂರು, ಕಾರ್ಯದರ್ಶಿ ಶಬೀರ್ ಪೊಸೋಟ್ಟು, ಜೊತೆ ಕಾರ್ಯದರ್ಶಗಳಾದ ಝುಬೈರ್ ಹಾರಿಸ್, ರಝ್ಝಾಕ್ ಗಾಂಧಿ ನಗರ, ಕೋಶಾಧಿಕಾರಿ ಅನ್ಸಾರ್ ಗಾಂಧಿನಗರ ಹಾಗೂ ಸಮಿತಿ ಸದಸ್ಯರಾದ ಯಾಕೂಬ್ ಹೊಸಂಗಡಿ , ನಾಸರ್ ಬಂಬ್ರಾಣ ಮೊದಲಾದವರು ಉಪಸ್ಥಿತರಿದ್ದರು.