6.47 ಕೋಟಿ ರೂ. ಮೌಲ್ಯದ 4.28 ಎಕರೆ ಪ್ರದೇಶ ಒತ್ತುವರಿ ತೆರವು: ಜೆ. ಮಂಜುನಾಥ್

Prasthutha|

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಸರ್ಕಾರಿ ಜಮೀನುಗಳಾದ ಕೆರೆ, ಕುಂಟೆ, ಗೋಮಾಳ, ಸ್ಮಶಾನ, ರಾಜಕಾಲುವೆ ಮತ್ತು ಇತರೆ ಸರ್ಕಾರಿ ಜಮೀನುಗಳನ್ನು ರಕ್ಷಿಸಲು ಶುಕ್ರವಾರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.

- Advertisement -

ಬೆಂಗಳೂರು ನಗರ ಜಿಲ್ಲೆಯಲ್ಲಿ 0.11 ವಿಸ್ತೀರ್ಣದ ಒಟ್ಟು ಎರಡು ಸರ್ಕಾರಿ ಕೆರೆಗಳು ಒತ್ತುವರಿಯಾಗಿದ್ದು ಅದರ ಅಂದಾಜು ಸುಮಾರು ರೂ.55 ಲಕ್ಷ ಮೌಲ್ಯವಾಗಿದೆ. ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಅಗರ ಗ್ರಾಮದ 0.06 ವಿಸ್ತೀರ್ಣದ ರೂ.30 ಲಕ್ಷ ಹಾಗೂ ಅನೇಕಲ್ ತಾಲ್ಲೂಕಿನ ಕಸಬಾ ಹೋಬಳಿಯ ಬ್ಯಾಗಡದೇನಹಳ್ಳಿ ಗ್ರಾಮದ 0.05 ವಿಸ್ತೀರ್ಣದ ರೂ. 25 ಲಕ್ಷ ಮೌಲ್ಯದ ಕೆರಗಳ ಒತ್ತುವರಿ ಮಾಡಿ ತೆರೆವುಗೊಳಿಸಲಾಗಿದೆ.


ಬೆಂಗಳೂರು ನಗರ ಜಿಲ್ಲೆಯಲ್ಲಿ 1.35 ವಿಸ್ತೀರ್ಣದ ಒಟ್ಟು ಎರಡು ನಕಾಶೆ ದಾರಿ ಒತ್ತುವರಿಯಾಗಿದ್ದು ಅದರ ಅಂದಜು ಸುಮಾರು ರೂ.95 ಲಕ್ಷದ ಮೌಲ್ಯವಾಗಿದೆ. ಆನೇಕಲ್ ತಾಲ್ಲೂಕಿನ ಕಸಬಾ ಹೋಬಳಿಯ ಗೆರೆಟಗನಬೆಲೆ ಗ್ರಾಮದ 1-20 ವಿಸ್ತೀರ್ಣದ ರೂ.75 ಲಕ್ಷ ಹಾಗೂ ಅತ್ತಿಬೆಲೆ ಹೋಬಳಿಯ ಕೂಡ್ಲೀಪುರ ಗ್ರಾಮದ 0-15 ವಿಸ್ತೀರ್ಣದ ರೂ.20 ಲಕ್ಷದ ಮೌಲ್ಯದ ನಕಾಶೆ ದಾರಿ ಒತ್ತುವರಿ ಮಾಡಿ ತೆರೆವುಗೊಳಿಸಲಾಗಿದೆ.

- Advertisement -


ಯಲಹಂಕ ತಾಲ್ಲೂಕಿನ ಜಾಲ-1 ಹೋಬಳಿಯ ಹುತ್ತನಹಳ್ಳಿ ಗ್ರಾಮದ 2.00 ವಿಸ್ತೀರ್ಣದ ಸರ್ಕಾರಿ ಗೋಮಾಳ ಒತ್ತುವರಿಯಾಗಿದ್ದು ಅದರ ಅಂದಜು ಸುಮಾರು ರೂ. 380 ಲಕ್ಷ ಮೌಲ್ಯದ ಒತ್ತುವರಿ ಮಾಡಿ ತೆರೆವುಗೊಳಿಸಲಾಗಿದೆ. ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೇಗೂರು ಹೋಬಳಿಯ ನ್ಯಾನಪನಹಳ್ಳಿ ಗ್ರಾಮದ 0-00.08 ವಿಸ್ತೀರ್ಣದ ಸರ್ಕಾರಿ ಗುಂಡುತೋಪು ಒತ್ತುವರಿಯಾಗಿದ್ದು ಅದರ ಅಂದಜು ಸುಮಾರು ರೂ. 2.19 ಲಕ್ಷ ಮೌಲ್ಯದ ಒತ್ತುವರಿ ಮಾಡಿ ತೆರೆವುಗೊಳಿಸಲಾಗಿದೆ. ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿಯ ದೊಡ್ಡತಿಮ್ಮಸಂದ್ರ ಗ್ರಾಮದ 0-19 ವಿಸ್ತೀರ್ಣದ ರೂ. 100.00 ಲಕ್ಷ ಮೌಲ್ಯದ ಹಾಗೂ ಸರ್ಜಾಪುರ ಹೋಬಳಿಯ ಹಲಸಹಳ್ಳಿ ತಿಪ್ಪಸಂದ್ರ ಗ್ರಾಮದ 0-02 ವಿಸ್ತೀರ್ಣದ ರೂ.15 ಲಕ್ಷ ಮೌಲ್ಯದ ಸರ್ಕಾರಿ ಖರಾಬು ಒತ್ತುವರಿ ಮಾಡಿ ತೆರೆವುಗೊಳಿಸಲಾಗಿದೆ.


ಒಟ್ಟು ರೂ. 6,47,19,000/- ಗಳ ಮೌಲ್ಯದ 4.28 ಎ/ಗು ವಿಸ್ತೀರ್ಣದ ಕೆರೆ, ಸರ್ಕಾರಿ ಗೋಮಾಳ, ಗುಂಡು ತೋಪು ಹಾಗೂ ಸರ್ಕಾರಿ ಖರಾಬು ಒತ್ತುವರಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp