ಚಂಡೀಗಡ: ಪಠಾಣ್ಕೋಟ್ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೋವಾದ ಮಾಜಿ ಕಾಂಗ್ರೆಸ್ ಶಾಸಕ ಜೋಗಿಂದರ್ ಪಾಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಗುರ್ದಿಯಾಲ್ ಸಿಂಗ್ ಸೈನಿ ಎಂಬಾತನಿಂದ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ದೂರು ಬಂದಿದ್ದು, ಜೂನ್ 8 ರಂದು ಅವರು ಮಾರ ಕಲಾನ್ ಗ್ರಾಮದ ಬಳಿ ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿದ ಪಠಾಣ್ಕೋಟ್ ನ ಹಿರಿಯ ಪೊಲೀಸ್ ಅಧೀಕ್ಷಕ (ಎಸ್ ಎಸ್ಪಿ) ಅರುಣ್ ಸೈನಿ, “ವಿಶ್ವಾಸಾರ್ಹ ದೂರವಾಣಿ ಮಾಹಿತಿಯ ಮೇರೆಗೆ, ಪೊಲೀಸ್ ತಂಡವನ್ನು ಜೂನ್ 8 ರಂದು ಮೈರಾ ಕಲಾನ್ ಗ್ರಾಮಕ್ಕೆ ಕಳುಹಿಸಲಾಯಿತು. ಅಲ್ಲಿ ಕೆಲವರು ಜೆಸಿಬಿ ಬಳಸಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದು ಕಂಡುಬಂದಿದೆ” ಎಂದು ಹೇಳಿದ್ದಾರೆ.