ಅಕ್ರಮ ಚಿನ್ನ ಸಾಗಾಟ| ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಬ್ಬರ ಬಂಧನ

Prasthutha|

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಾಟ ನಡೆಸುತ್ತಾ ಇದ್ದ ಚಿನ್ನ ವಶಕ್ಕೆ ಪಡೆದು ಕೇರಳದ ಇಬ್ಬರನ್ನು ಬಂಧಿಸಲಾಗಿದೆ.

- Advertisement -

ಬಂಧಿತರನ್ನು ಕೇರಳದ ಮೂಲದ ಮಹಮ್ಮದ್ ಅನ್ಸಾರ್ ಕಯ್ಯಾರ್(34), ಮಹಮ್ಮದ್ ಮೂಸಾ ಮಿಯಾಸ್(18) ಎಂದು ಗುರುತಿಸಲಾಗಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡೆಪ್ಯುಟಿ ಕಮೀಷನರ್ ಪ್ರವೀಣ್ ಕಂಧಿ, ಕಸ್ಟಮ್ಸ್ ಅಧಿಕಾರಿಗಳಾದ ನಾಗೇಶ್ ಕುಮಾರ್, ಸೂಪರಿಂಟೆಂಡೆಂಟ್‌ ಮನೋಕಾತ್ಯಾಯಿನಿ ಕಾರ್ಯಾಚರಣೆ ನಡೆಸಿ ಸೂಟ್ಕೇಸ್ ಅಡಿ ಭಾಗದಲ್ಲಿ ಪೇಸ್ಟ್ ಮಾಡಿ ಇಡಲಾದ ಸುಮಾರು 34,46,464 ರೂಪಾಯಿ ಮೌಲ್ಯದ 703 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.

Join Whatsapp