ಅಕ್ರಮ ಗೋ ಸಾಗಾಟ; 120 ಮಂದಿಯ ಬಂಧನ

Prasthutha|

ಲಕ್ನೋ: ಅಕ್ರಮ ಗೋ ಸಾಗಾಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಬರೇಲಿಯಲ್ಲಿ ಪೊಲೀಸರು 120 ಮಂದಿಯನ್ನು ಬಂಧಿಸಿದ್ದಾರೆ.

- Advertisement -

120 ಆರೋಪಿಗಳಲ್ಲಿ 110 ಜನರನ್ನು ಅಕ್ರಮ ಗೋಸಾಟ ಪ್ರಕರಣಗಳಲ್ಲಿ ಮತ್ತು 10 ಮಂದಿಯನ್ನು ಗೋಹತ್ಯೆ ಪ್ರಕರಣಗಳಲ್ಲಿ ಬಂಧಿಸಲಾಗಿದೆ.


ಬರೇಲಿ ಜಿಲ್ಲೆಯ 29 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧಿಗಳನ್ನು ಬಂಧಿಸಲಾಗಿದೆ ಎಂದು ಗ್ರಾಮೀಣ ಎಸ್ಪಿ ರಾಜ್ ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ.

- Advertisement -

ಆರೋಪಿಗಳಿಂದ ಹೆಚ್ಚಿನ ಪ್ರಮಾಣದ ಗೋಮಾಂಸ ಮತ್ತು ಗೋಹತ್ಯೆಗೆ ಬಳಸುವ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಗೋಹತ್ಯೆ ಪ್ರಕರಣಗಳಿಂದಾಗಿ ಕಾನೂನು ಸುವ್ಯವಸ್ಥೆ ಕೂಡ ಹದಗೆಟ್ಟಿದೆ ಎಂದು ಅಗರ್ವಾಲ್ ಹೇಳಿದರು.

Join Whatsapp