ಜಿಝಾನ್ (ಸೌದಿ ಅರೇಬಿಯಾ): ಇಂಡಿಯಾ ಫ್ರೆಟರ್ನಿಟಿ ಫೋರಂ (IFF) ಸೌದಿ ಅರೇಬಿಯಾದಾದ್ಯಂತ ಹಮ್ಮಿಕೊಂಡ ಪ್ಲಾಸ್ಮಾ ಹಾಗೂ ರಕ್ತದಾನ ಅಭಿಯಾನದ ಅಂಗವಾಗಿ IFF ಜಿಝಾನ್ ಕರ್ನಾಟಕ ಚಾಪ್ಟರ್ ಹಾಗೂ ಸಬ್ಯಾ ಜನರಲ್ ಆಸ್ಪತ್ರೆ ಜಿಝಾನ್ ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರವು ಇತ್ತೀಚಿಗೆ ಸಬ್ಯಾ ಜನರಲ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ನಲ್ಲಿ ನಡೆಯಿತು.
ಅನಿವಾಸಿ ಕನ್ನಡಿಗರು ವಿರಳ ಸಂಖ್ಯೆಯಲ್ಲಿರುವ ಜಿಝಾನ್ ವಲಯದಲ್ಲಿ IFF ಕಾರ್ಯಕರ್ತರೂ ಸೇರಿದಂತೆ 65 ಮಂದಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಅನಿವಾಸಿ ಮಹಿಳೆಯೋರ್ವರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.
IFF ಜಿಝಾನ್ ಕರ್ನಾಟಕ ಚಾಪ್ಟರ್ ನ ಅಧ್ಯಕ್ಷ ಇಕ್ಬಾಲ್ ಕೂಳೂರು ಶಿಬಿರವನ್ನು ಉದ್ಘಾಟಿಸಿದರು. IFF ಸೌದಿ ಅರೇಬಿಯಾದ ಅಸಿರ್ ಪ್ರಾಂತ್ಯದ ಅಧ್ಯಕ್ಷ ಸಲೀಂ ಗುರುವಾಯನಕೆರೆ, ರಕ್ತದಾನದ ಮಹತ್ವದ ಬಗ್ಗೆ ವಿವರಿಸಿದರು. IFF ಜಿಝಾನ್ ಕರ್ನಾಟಕ ಚಾಪ್ಟರ್ ಕಾರ್ಯದರ್ಶಿ ಹನೀಫ್ ಜೋಕಟ್ಟೆ ಹಾಗೂ ಇಂಡಿಯನ್ ಸೋಷಿಯಲ್ ಫೋರಂ(ISF) ಜಿಝಾನ್ ಇದರ ನಾಯಕರಾದ ಅಝೀಝ್ ಮೂಡಬಿದ್ರೆ ಹಾಗೂ ನೌಶಾದ್ ಕಲಂದರ್ ಕರ್ನಿರೆ ಉಪಸ್ಥಿತರಿದ್ದರು.
IFF ಬೈಶ್ ಘಟಕದ ಸದಸ್ಯ ಸವಾದ್ ವಳವೂರು ಸ್ವಾಗತಿಸಿದರು. IFF ಬೈಶ್ ಘಟಕಾಧ್ಯಕ್ಷ ತನ್ವೀರ್ ಬಜ್ಪೆ ಧನ್ಯವಾದ ಸಲ್ಲಿಸಿದರು.
ಜಿಝಾನ್ ವಲಯದಲ್ಲಿ ಪ್ರಸ್ತುತ ಸಂದರ್ಭದಲ್ಲಿ ರಕ್ತದ ಕೊರತೆಯನ್ನು ನೀಗಿಸುವಲ್ಲಿ ಸಹಕರಿಸಿದ ಇಂಡಿಯಾ ಫ್ರೆಟರ್ನಿಟಿ ಫೋರಂ ಸಂಸ್ಥೆಗೆ ಸಬ್ಯಾ ಜನರಲ್ ಹಾಸ್ಪಿಟಲ್ ಜಿಝಾನ್ ವಲಯದ ಪ್ರಧಾನ ಕಾರ್ಯನಿರ್ವಾಹಕ ಗಾಲಿಬ್ ಹೂದಾನ್ ಗೌರವ ಪ್ರಮಾಣ ಪತ್ರ ಹಸ್ತಾಂತರಿಸಿದರು.