ಮಡಿಕೇರಿ: ಪೊಲೀಸ್ ವೈಫಲ್ಯದ ವಿರುದ್ಧ ಮಡಿಕೇರಿ ಎಸ್.ಪಿ ಕಚೇರಿ ಮುಂದೆ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಕೊಡಗಿನ ಶಾಸಕರ ಬಗ್ಗೆ ಕಾಂಗ್ರೆಸ್ ನಾಯಕರು ಅಸಭ್ಯ ಪದ ಬಳಸಿದ್ದಾರೆಂದಿರುವ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಇದನ್ನು ಖಂಡಿಸುವುದಾಗಿ ತಿಳಿಸಿದ್ದಾರೆ.
ಸಂಸ್ಕೃತಿ ಮರೆತು ಅಸಭ್ಯ ಪದಬಳಕೆ ಮಾಡಿ ತಮ್ಮ ಸಂಸ್ಕೃತಿ ಏನೆಂಬುದನ್ನು ಕಾಂಗ್ರೆಸ್ ಮುಖಂಡರು ತೋರಿಸಿದ್ದಾರೆ. ಕೊಡಗು ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಲಕ್ಷ್ಮಣ್ ಎಂಬಾತ ಸಬ್ಯತೆ ಮೀರಿ ಪದಬಳಕೆ ಮಾಡಿದ್ದಾರೆ ಎಂದು ಆರೋಪಿಸಿರುವ ಬೋಪಯ್ಯ, ಈತನ ಸಂಸ್ಕೃತಿ ಮತ್ತು ಇತಿಹಾಸ ಏನೆಂಬುದು ಎಲ್ಲರಿಗೂ ತಿಳಿದಿದೆ. ಹಾದಿ ಬೀದಿಲಿ ಹೋಗುವವರ ಟೀಕೆ ಬಗ್ಗೆ ಪ್ರತಿಕ್ರಿಯೆ ಮಾಡಲಾರೆ .
ಮುಂದಿನ ಶುಕ್ರವಾರ ನನ್ನ ಮನೆ ಮುಂದೆ ಪ್ರತಿಭಟನೆ ಮಾಡುವುದಾಗಿ ಕೆಲವು ಕಾಂಗ್ರೆಸ್ಸಿಗರು ಹೇಳಿದ್ದಾರಂತೆ. ಇಂಥವರು ನನ್ನ ಮನೆ ಮುಂದೆ ಬಂದರೆ ನನ್ನ ಮನೆ ನಾಯಿಗಳು ಅವರನ್ನು ಸ್ವಾಗತಿಸುತ್ತವೆ, ಎಚ್ಚರಿಕೆ ಇರಲಿ ಎಂದು ಕಿಡಿಕಾರಿದ್ದಾರೆ.