ನಿತೀಶ್ ಕುಮಾರ್ ಪ್ರಧಾನಿಯಾದರೆ ಕೆಂಪುಕೋಟೆಯಲ್ಲಿ ಪಾಕ್ ಧ್ವಜ ಹಾರಿಸಲಿದ್ದಾರೆ: ಬಿಜೆಪಿ ಶಾಸಕ

Prasthutha|

ಪಾಟ್ನಾ: ಮುಖ್ಯಮಂತ್ರಿ ನಿತೀಶ್ ಕುಮಾರ್  ಮುಂದೊಮ್ಮೆ ಪ್ರಧಾನಿಯಾಗಿ ಆಯ್ಕೆಯಾದರೆ  ದೆಹಲಿಯ ಕೆಂಪುಕೋಟೆಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸುತ್ತಾರೆ ಎಂಬ ಬಿಜೆಪಿ ಶಾಸಕರೊಬ್ಬರ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ.

- Advertisement -

2024 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸಿದ ನಂತರ ತಮ್ಮ  ನಾಯಕ ನಿತೀಶ್ ಕುಮಾರ್ ತ್ರಿವರ್ಣ ಧ್ವಜವನ್ನು ಹಾರಿಸಲಿ ಎಂದು ಜೆಡಿಯು ನಾಯಕರು ಭಾನುವಾರ ನಡೆದ ಪಕ್ಷದ ಸರ್ವಸದಸ್ಯ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.ಈ  ಬಗ್ಗೆ  ಪ್ರತಿಕ್ರಿಯಿಸಿರುವ ಬಿಸ್ ಪಿ ಕ್ಷೇತ್ರದ ಶಾಸಕ ಹರಿಭೂಷಣ್ ಠಾಕೂರ್ ಬಚೋಲ್, ಈ ವಿವಾದಿತ ಹೇಳಿಕೆ ನೀಡಿದ್ದಾರೆ.

ನರೇಂದ್ರ ಮೋದಿಗೆ ಯಾವುದೇ ರಾಜಕಾರಣಿಯನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ನಿತೀಶ್ ಗೆದ್ದರೆ ನಮ್ಮದೇ ಧ್ವಜ ಹಾರಿಸುವ ಬದಲು ಪಾಕಿಸ್ತಾನದ ಧ್ವಜವನ್ನು  ಹಾರಿಸಬಹುದು ಎಂದು ಠಾಕೂರ್ ವ್ಯಂಗ್ಯವಾಡಿದ್ದಾರೆ.

- Advertisement -

ಹೇಳಿಕೆಗೆ ಪ್ರತಿಕ್ರಿಯಿಸಿರುವ ಜೆಡಿಯು ಹಿರಿಯ ನಾಯಕ ಮತ್ತು ಸಚಿವ ಅಶೋಕ್ ಚೌಧರಿ, ನಾವು ಮಾನವೀಯತೆಯಿಂದ ನೋಡುತ್ತೇವೆ. ನಮ್ಮ ಪಕ್ಷ ಯಾವುದೇ ನಿರ್ದಿಷ್ಟ ಸಮುದಾಯಕ್ಕಾಗಿ ಮೀಸಲಲ್ಲ. ಬಚೋಲ್ ಗೆ ಮತ್ತು ಅವರ ಬಣಕ್ಕೆ ಮುಸ್ಲಿಮರೊಂದಿಗೆ ಏನು ಸಮಸ್ಯೆ ಇದೆ? ದೇಶದ ಸ್ವಾತಂತ್ರಕ್ಕಾಗಿ ಮುಸ್ಲಿಮರ ಬಲಿದಾನವಾಗಲಿಲ್ಲವೇ? ದೇಶಕ್ಕಾಗಿ ಅವರು ಹಲವು ರೀತಿಯಲ್ಲಿ ಸೇವೆ ಸಲ್ಲಿಸಲಿಲ್ಲವೇ? ಸೈನ್ಯದಲ್ಲಿಲ್ಲವೆ? ನಿತೀಶ್ ಕುಮಾರ್ ಗೆ ಪ್ರಧಾನಿಯಾಗಲು ಬೇಕಾದ ಎಲ್ಲ ಸಾಮರ್ಥ್ಯ ಅವರಲ್ಲಿದೆ  ಎಂದು ಹೇಳಿದರು.

Join Whatsapp