ನರೇಂದ್ರ ಮೋದಿ ಹಿಟ್ಲರ್‌ನಂತೆ ವರ್ತಿಸಿದ್ರೆ, ಅವನಂತೇ ಸಾಯ್ತಾನೆ: ಮಾಜಿ ಸಚಿವ ಸುಬೋದ್ ಕಾಂತ್

Prasthutha|

ನವದೆಹಲಿ: ಪ್ರಧಾನಿ ಮೋದಿ ಅವರನ್ನು ಕಾಂಗ್ರೆಸ್ ನಾಯಕ ಸುಬೋಧ್ ಕಾಂತ್ ಸಹಾಯ್ ಅವರು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ನಿಗೆ ಹೋಲಿಸುವ ಮೂಲಕ ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಅಗ್ನಿಪಥ್ ಯೋಜನೆ ವಿರುದ್ದ ಕಾಂಗ್ರೆಸ್ ಕೈಗೊಂಡಿರುವ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ಹಿಟ್ಲರ್ ಮಾರ್ಗ ಅನುಸರಿಸಿದರೆ ಹಿಟ್ಲರ್‌ನ ರೀತಿಯಲ್ಲೇ ಸಾವಿಗೆ ಶರಣಾಗಬಹುದು ಎಂದು ಪ್ರತಿಭಟನೆಯಲ್ಲಿ ಸುಬೋಧ್ ಕಾಂತ್ ಸಹಾಯ್ ಹೇಳಿದರು.

ಸರ್ವಾಧಿಕಾರಿ ಹಿಟ್ಲರ್ ಕೂಡ ಇಂತಹ ಸಂಘಟನೆಯನ್ನು ಹುಟ್ಟು ಹಾಕಿದ್ದ, ಅದರ ಹೆಸರು ಖಾಕಿ, ಸೇನೆಯ ಮಧ್ಯದಿಂದ ಈ ಸಂಘಟನೆಯನ್ನು ಹುಟ್ಟು ಹಾಕಿದ್ದ, ಮೋದಿ ಹಿಟ್ಲರ್ ಹಾದಿ ಹಿಡಿದರೆ ಹಿಟ್ಲರ್ ರೀತಿಯಲ್ಲೇ ಸಾಯುತ್ತಾನೆ ಎಂದರು.



Join Whatsapp