ವಿಜಯಪುರ: ‘ಮುಸ್ಲಿಮ್ ರಾಜರು ಹಿಂದೂ ವಿರೋಧಿಗಳಾಗಿದ್ದರೆ, ಭಾರತದಲ್ಲಿ ಹಿಂದೂಗಳೇ ಉಳಿಯುತ್ತಿರಲಿಲ್ಲ’ ಎಂದು ಜಿಲ್ಲಾ ನಿವೃತ್ತ ನ್ಯಾಯಾಧೀಶ ವಸಂತ ಮುಳಸಾವಳಗಿ ಹೇಳಿದ್ದಾರೆ.
ನಗರದಲ್ಲಿ ನಡೆದ ವಿಚಾರಗೋಷ್ಟಿಯೊಂದರಲ್ಲಿ ಮಾತನಾಡಿದ ಅವರು, ಮುಸ್ಲಿಮರು ಏಳುನೂರು ವರ್ಷ ಆಳ್ವಿಕೆ ಮಾಡಿದ್ದಾರೆ ಎಂದು ಇತಿಹಾಸ ಹೇಳುತ್ತೆ. ಮುಸ್ಲಿಮರು ಹಿಂದೂ ವಿರೋಧಿಗಳಾಗಿದ್ದರೆ, ಭಾರತದಲ್ಲಿ ಹಿಂದೂಗಳೇ ಉಳಿಯುತ್ತಿರಲಿಲ್ಲ. ಅವರಿಗೆ ಎಲ್ಲರನ್ನೂ ಕೊಲ್ಲಬಹುದಿತ್ತು. ಆದರೂ ಮುಸ್ಲಿಮರು ಯಾಕೆ ಅಲ್ಪಸಂಖ್ಯಾತರಾದರು ಎಂದು ಪ್ರಶ್ನಿಸಿದರು.
ಹಿಂದೂ ಧರ್ಮದವಳಾಗಿದ್ದ ಅಕ್ಬರ್ ನ ಪತ್ನಿ ಮತಾಂತರಗೊಂಡಿರಲಿಲ್ಲ. ಆಕೆ ಹಿಂದೂ ಧರ್ಮದಲ್ಲೇ ಉಳಿದುಕೊಂಡಿದ್ದಳು. ಮಾತ್ರವಲ್ಲ ಆತ ಮುಸ್ಲಿಮನಾಗಿಯೇ ಜೀವಿಸಿದ್ದ. ಅಕ್ಬರ್ ತನ್ನ ಆಸ್ಥಾನದಲ್ಲಿ ಕೃಷ್ಣನ ಮಂದಿರವನ್ನೂ ಕಟ್ಟಿಸಿದ್ದಾನೆ. ಬೇಕಾದವರು ಹೋಗಿ ನೋಡಬಹುದು’ ಎಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದಾಗ ದೇಶದಲ್ಲಿದ್ದ ಎಲ್ಲಾ ದೇವಸ್ಥಾನ, ಮಂದಿರ, ಮಸೀದಿ, ಚರ್ಚ್ ಗಳ ಯಥಾಸ್ಥಿತಿ ಕಾಪಾಡಬೇಕು ಎಂಬ ಕಾನೂನು ತರಲಾಗಿದೆ. ಆದರೂ ಜಿಲ್ಲಾ ಕೋರ್ಟ್ ಗಳು ಮಸೀದಿಗಳ ಕೆಳಗೆ ಲಿಂಗ ಇದೆಯೆ ಎಂದು ಶೋಧಿಸಲು ಅನುಮತಿ ನೀಡುತ್ತಿರುವುದು ವಿಷಾಯದನೀಯ ಎಂದು ಬೇಸರ ವ್ಯಕ್ತಪಡಿಸಿದರು.
‘ರಾಮ ಮತ್ತು ಕೃಷ್ಣ ಇತಿಹಾಸ ಪುರುಷರಲ್ಲ, ಅವರು ಕೇವಲ ಕಾದಂಬರಿಯ ಪಾತ್ರಧಾರಿಗಳು ಮಾತ್ರ. ಅಶೋಕ ಚಕ್ರವರ್ತಿ ಒಬ್ಬನಿಜವಾದ ಇತಿಹಾಸ ಪುರುಷ’ ಎಂದು ವಸಂತ ಮುಳಸಾವಳಗಿ ಹೇಳಿದ್ದಾರೆ.