ಭುವನೇಶ್ವರ: 2024ರಲ್ಲಿ ಮೋದಿ ಗೆದ್ದರೆ, ದೇಶದಲ್ಲಿ ಮುಂದೆಂದೂ ಚುನಾವಣೆ ನಡೆಯದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಭುವನೇಶ್ವರದಲ್ಲಿ ‘ಒಡಿಶಾ ಬಚಾವೋ ಸಮಾವೇಶ’ದ ರ್ಯಾಲಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಬಿಜೆಪಿ ಮತ್ತು ಅದರ ಸಿದ್ಧಾಂತವಾದಿಯಾಗಿರುವ ಆರ್ ಎಸ್ ಎಸ್ ನಿಂದ ದೂರವಿರಿ, ಅದು ವಿಷವಿದ್ದಂತೆ’ ಎದುರು ಕಿಡಿಕಾರಿದ್ದಾರೆ.
ದೇಶದಲ್ಲಿ ಪ್ರಜಾಪ್ರಭುತ್ವನ್ನು ಉಳಿಸಲು 2024ರ ಲೋಕಸಭೆ ಚುನಾವಣೆಯು ಜನರಿಗಿರುವ ಕೊನೆಯ ಅವಕಾಶ. ಚುನಾವಣೆಯಲ್ಲಿ ಗೆದ್ದು ಮೋದಿ ಮತ್ತೆ ಪ್ರಧಾನಿಯಾದರೆ ದೇಶದಲ್ಲಿ ಸರ್ವಾಧಿಕಾರ ಜಾರಿಗೆ ಬರಲಿದೆ ಎಂದರು.