ಅಯೋಧ್ಯಾ: ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸದಿದ್ದರೆ, ಅ.2ರಂದು ಜಲಸಮಾಧಿಯಾಗುವುದಾಗಿ ತಪಸ್ವಿ ಛಾವಣಿಯ ಉತ್ತರಾಧಿಕಾರಿ ಮಹಂತ್ ಪರಮಹಂಸ್ ದಾಸ್ ಹೇಳಿದ್ದಾರೆ.
ಇಲ್ಲಿನ ನಾಗರಿಕರನ್ನು ರಕ್ಷಿಸಲು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು ಬಹಳ ಮುಖ್ಯ. ಇನ್ನು ನಾನು ಸಂತರ ಸಂಪ್ರದಾಯವನ್ನು ಅನುಸರಿಸಿದ್ದೇನೆ. ಸಾವಿನ ನಂತರ ಮಾಡಬೇಕಾದ ಕ್ರಿಯೆಗಳನ್ನು ಮೊದಲೇ ಮಾಡಿ ಮುಗಿಸಿದ್ದೇನೆ.
ದೇಶದ ಜನರ ಹಿತಾಸಕ್ತಿ ಮತ್ತು ಸಾಮಾಜಿಕ ಹಿತದೃಷ್ಟಿಯಿಂದ ಈ ದೇಶವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು ಎಂದು ನಾನು ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮುಂದೆ ಬೇಡಿಕೆ ಇಟ್ಟಿದ್ದೇನೆ ಎಂದು ತಿಳಿಸಿದ್ದಾರೆ.