ಇತಿಹಾಸ ತಿರುಚಿದರೆ ಮುಂದಿನ ಪೀಳಿಗೆಯನ್ನು ಹಾದಿ ತಪ್ಪಿಸಿದಂತಾಗುತ್ತದೆ : ಡಾ. ಎಲ್. ಹನುಮಂತಯ್ಯ

Prasthutha|

ಬೆಂಗಳೂರು : ಇತಿಹಾಸದ ನೈಜ ಚಿತ್ರಣವನ್ನು ಕಟ್ಟಿಕೊಡುವ ಅಗತ್ಯ ಹಿಂದೆಂದಿಗಿಂತ ಇದೀಗ ಹೆಚ್ಚಾಗಿದೆ ಎಂದು ಹಿರಿಯ ಸಾಹಿತಿ ಹಾಗೂ ರಾಜ್ಯ ಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಹೇಳಿದ್ದಾರೆ.

- Advertisement -


ಕನಕಪುರ ರಸ್ತೆಯ ಕಾನ್ಷಿ ಫೌಂಡೇಷನ್ ಆವರಣದಲ್ಲಿಂದು ಲೇಖಕಿ, ಸಂಶೋಧಕಿ, ಇತಿಹಾಸಕಾರ್ತಿ ವಿಜಯಾ ಮಹೇಶ್ ಅವರ ನಾಲ್ಕಡಿ ಭಾಷಣಗಳ ಸಂಗ್ರಹ, ನೆಲದ ಮಾತು, ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ್ದು ಏಕೆ?, ಅಂಬೇಡ್ಕರ್ ಮತ್ತು ಗಾಂಧಿ ಮುಖಾಮುಖಿ ಪುಸ್ತಕಗಳನ್ನು ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಬಿಡುಗಡೆ ಮಾಡಿದರು.


ಪರಿಸರ ವಲಯದಲ್ಲಿ ಭೂಹಳ್ಳಿ ಪುಟ್ಟಸ್ವಾಮಿ, ಸಾಂಸ್ಕೃತಿಕ ವಲಯದಲ್ಲಿ ಜಿ. ಮುನಿರೆಡ್ಡಿ, ಸಾಹಿತ್ಯ ಕ್ಷೇತ್ರದ ಸೋಸಲೆ ಗಂಗಾಧರ್, ಸಾವಯವ ಕೃಷಿಗೆ ಎಸ್. ಸಿ. ಮಧುಚಂದನ್, ಮಾಧ್ಯಮ ವಲಯದ ವಿಜಯಲಕ್ಷ್ಮಿ ಶಿಬರೂರು ಅವರಿಗೆ 25000 ನಗದು, ಬೆಳ್ಳಿ ಪದಕ ಒಳಗೊಂಡ 2021 ನೇ ಸಾಲಿನ ವಿಜಯಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

- Advertisement -


ಈ ಸಮಾರಂಭದಲ್ಲಿ ಮಹಾಬೋಧಿ ಸೊಸೈಟಿ ಬೆಂಗಳೂರು ಪೂಜ್ಯ ಆನಂದ ಭಂತೆ, ಮಾಜಿ ಶಿಕ್ಷಣ ಸಚಿವ ಎನ್ . ಮಹೇಶ್ ಮತ್ತಿತರರು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಡಾ. ಎಲ್. ಹನುಮಂತಯ್ಯ ಮಾತನಾಡಿ, ವಿಜಯಾ ಮಹೇಶ್ ಇತಿಹಾಸವನ್ನು ತಮ್ಮ ಕೃತಿಗಳಲ್ಲಿ ಪ್ರತಿಂಬಿಸಿದ್ದಾರೆ. ಇತಿಹಾಸ ತಿರುಚುವವರಿಗೆ ಇದು ನಿಜಕ್ಕೂ ಸೂಕ್ತ ಉತ್ತರವಾಗಿದೆ. ಇವರ ಕೃತಿಗಳು ಶಾಲಾ, ಕಾಲೇಜುಗಳಿಗೆ ಪಠ್ಯ ಕ್ರಮವಾಗಿ ಅಳವಡಿಸುವಷ್ಟು ಸಾಮರ್ಥ್ಯ ಹೊಂದಿವೆ. ಇತಿಹಾಸವನ್ನು ಇತಿಹಾಸದಂತೆ ನೋಡಬೇಕು. ಇತಿಹಾಸವನ್ನು ತಿರುಚುವುದು ಸರಿಯಲ್ಲ. ಇದರಿಂದ ಮುಂದಿನ ಪೀಳಿಗೆಯನ್ನು ಹಾದಿ ತಪ್ಪಿಸಿದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ವಿಜಯಾ ಮಹೇಶ್ ಅವರು ಸಮಾಜ ಸೇವೆ ಉದ್ದೇಶದಿಂದ 2019 ರಲ್ಲಿ ದೇಶದ ರಾಜಕೀಯ ದಾರ್ಶನಿಕ, ಶೋಷಿತ ಸಮುದಾಯಗಳ ರಾಜಕೀಯ ಏಳಿಗೆಗಾಗಿ ಶ್ರಮಿಸಿದ ದಾದಾಸಾಹೇಬ್ ಕಾರಾಂಜೀ ರವರ ಹೆಸರಿನಲ್ಲಿ ಕಾನ್ಸಿ ಫೌಂಡೇಷನ್ ಸ್ಥಾಪಿಸಿದ್ದಾರೆ.



Join Whatsapp