ಹುಬ್ಬಳ್ಳಿ: ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ತಂಡವೊಂದು ಮಾರಕಾಸ್ತ್ರಗಳಿಂದ ಹತ್ಯೆ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡಿದ ಮುತಾಲಿಕ್, ಹಿಂದೂಗಳು ಪ್ರತೀಕಾರಕ್ಕೆ ಮುಂದಾದರೆ ಒಬ್ಬ ಮುಸಲ್ಮಾನನೂ ಇರಲ್ಲಎಂದು ಹೇಳಿದ್ದು, ಕೊಲೆಗೆ ಕೊಲೆಯೇ ಉತ್ತರವಾದರೆ ಈ ದೇಶದಲ್ಲಿ ಕಾನೂನು ನ್ಯಾಯಾಲಯ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಹತ್ಯೆ ಪ್ರಕರಣದಲ್ಲಿ ಪೊಲೀಸ್ ವರದಿ ಬರುವ ಮೊದಲೇ ಒಂದು ನಿರ್ದಿಷ್ಟ ಸಮುದಾಯದ ಮೇಲೆ ಕೊಲೆಯನ್ನು ಎತ್ತಿಕಟ್ಟಿ ಸಮಾಜದ ಸ್ವಾಸ್ಥ್ಯ ಕೆಡುವಂತಹಾ ಹೇಳಿಕೆ ನೀಡುತ್ತಿರುವ ಇಂತಹವರನ್ನು ಮೊದಲು ಬಂಧಿಸಿ, . ಯಾವುದೇ ಅಭಿಪ್ರಾಯ ಹೇಳಲು ಅವಕಾಶ ನೀಡಬಾರದು ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿವೆ.