ಕೋವಿಡ್ ವೇಳೆ ಸರಕಾರ ಸಚಿವರ ಶವ ಬಿಸಾಡಿದರೆ, ಮುಸ್ಲಿಮರು ಮಾದರಿಯಾದರು: ಡಿ.ಕೆ.ಶಿವಕುಮಾರ್

Prasthutha|

ಬೆಂಗಳೂರು: ಕೋವಿಡ್ ವೇಳೆ ಸರ್ಕಾರ ಸಚಿವರ ಶವವನ್ನೇ ಬಿಸಾಡಿದರೆ, ಮುಸ್ಲಿಮರು ಮೃತದೇಹಗಳ ಗೌರವ ಅಂತ್ಯಕ್ರಿಯೆ ನೆರವೇರಿಸಿ ಮಾದರಿಯಾದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

- Advertisement -


ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ನೂತನ ಅಧ್ಯಕ್ಷ ಕೆ.ಅಬ್ದುಲ್ ಝಬ್ಬರ್ ಅವರ ಪದಗ್ರಹಣ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೋವಿಡ್ ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನೆರವೇರಿಸುವಲ್ಲಿ ವಿಫಲಗೊಂಡಿದ್ದು, ಕೇಂದ್ರ ಸಚಿವ ಸುರೇಶ್ ಅಂಗಡಿ ಶವವನ್ನೆ ಬಿಸಾಡಿತು. ಆದರೆ, ಮುಸ್ಲಿಮರು ಮೃತದೇಹಗಳ ಗೌರವ ಅಂತ್ಯಕ್ರಿಯೆ ನಡೆಸಿ ಮನುಕುಲಕ್ಕೆ ಮಾದರಿಯಾದರು ಎಂದು ಅವರು ಹೇಳಿದರು.

ಸರಕಾರ ಕೋವಿಡ್ ಸಂದರ್ಭದಲ್ಲಿ ಮೃತದೇಹಗಳನ್ನು ಜೆಸಿಬಿ ಮೂಲಕ ಎಸೆಯಿತು. ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಶವವನ್ನೇ ಮೃತದೇಹವನ್ನು ಬಿಸಾಡಿದರೆ, ರಾಜ್ಯದ ಅಲ್ಪಸಂಖ್ಯಾತರು ಮಾನವೀಯತೆಯಿಂದ ಗೌರವ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ ಕಾರ್ಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರಿಗೆ ನಾನು ವಿಶೇಷ ಗೌರವ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.

Join Whatsapp