2024ರಲ್ಲಿ ಬಿಜೆಪಿ ಸೋತರೆ ಯಾರೂ ಬೇಕಾದರೂ ಪ್ರಧಾನಿಯಾಗಬಹುದು: ನಿತೀಷ್ ಕುಮಾರ್ ರೇಸ್‌ನಲ್ಲಿಲ್ಲ ಎಂದು ಸ್ಪಷ್ಟಪಡಿಸಿದ ಜೆಡಿಯು

Prasthutha|

ಪಾಟ್ನಾ: 2024ರಲ್ಲಿ ಪ್ರತಿಪಕ್ಷಗಳು ಬಿಜೆಪಿಯನ್ನು ಸೋಲಿಸಿದರೆ, “ಯಾರು ಬೇಕಾದರೂ ಪ್ರಧಾನಿಯಾಗಬಹುದು” ಎಂದು ಬಿಹಾರದ ಆಡಳಿತಾರೂಢ ಜೆಡಿಯು(ಜನತಾ ದಳ ಯುನೈಟೆಡ್‌)ನ ನಾಯಕರೊಬ್ಬರು ಇಂದು ಹೇಳಿದ್ದಾರೆ. ಈ ಮೂಲಕ  ನಿತೀಶ್ ಕುಮಾರ್ ಅವರು ಪ್ರಧಾನಿ ಸ್ಪರ್ಧೆಯಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

- Advertisement -

ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ನಿತೀಶ್ ಕುಮಾರ್ ಅವರನ್ನು 2024 ರಲ್ಲಿ ಪ್ರಧಾನಿ ಹುದ್ದೆಗೆ “ಪ್ರಬಲ ಅಭ್ಯರ್ಥಿ” ಎಂದು ಕರೆದ ಬೆನ್ನಲ್ಲೇ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಲಾಲನ್ ಸಿಂಗ್ ಈ ಹೇಳಿಕೆ ನೀಡಿದ್ದು, “ನಾವು ಅವರನ್ನು ಪ್ರಧಾನಿಯಾಗಿ ನೋಡುವುದಿಲ್ಲ” ಎಂದು ಹೇಳಿದ್ದಾರೆ.

ನಿತೀಶ್ ಕುಮಾರ್‌ಗೆ ಪ್ರಧಾನಿಯಾಗುವ ಎಲ್ಲಾ ಅರ್ಹತೆಗಳೂ ಇವೆ. ಆದರೆ ಅವರು ಪ್ರಧಾನಿ ಅಭ್ಯರ್ಥಿ ಅಲ್ಲ ಎಂದು ನಾವು ಈ ಹಿಂದೆಯೇ ಹಲವು ಬಾರಿ ಹೇಳಿದ್ದೇವೆ ಎಂದರು.

- Advertisement -

ಯಾರು ಪ್ರಧಾನಿಯಾಗುತ್ತಾರೆ ಎನ್ನುವುದಕ್ಕಿಂತ ಪ್ರತಿಪಕ್ಷಗಳ ಒಗ್ಗಟ್ಟಿನತ್ತ ಗಮನ ಹರಿಸುವುದು ಮುಖ್ಯ ಎಂದು ಲಾಲನ್ ಸಿಂಗ್ ಹೇಳಿದ್ದಾರೆ. “ಬಿಜೆಪಿಯನ್ನು ಎದುರಿಸಲು ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ನಿತೀಶ್ ಕುಮಾರ್ ಕೆಲಸ ಮಾಡಬೇಕಿದೆ. ಬಿಜೆಪಿಯನ್ನು ಸೋಲಿಸಿದರೆ, ನಂತರ ಯಾರಾದರೂ ಪ್ರಧಾನಿಯಾಗಬಹುದು” ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷರು ಹೇಳಿದ್ದಾರೆ.



Join Whatsapp