ಬಿಜೆಪಿಗೆ ಸೇರಿದರೆ ಜಾಮೀನು ದೊರಕಿಸುವುದಾಗಿ NIA ಅಧಿಕಾರಿಗಳಿಂದ ಆಮಿಷ!

Prasthutha|

ಗುವಾಹಟಿ:  ಜೈಲಿನಲ್ಲಿ ನನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ. ಬಿಜೆಪಿ ಅಥವಾ ಆರ್ ಎಸ್ ಎಸ್ ಗೆ ಸೇರ್ಪಡೆಯಾದರೆ ಜಾಮೀನು ನೀಡುತ್ತೇವೆ ಎಂದು NIA ವಿಚಾರಣಾಧಿಕಾರಿಗಳು ಆಮಿಷವೊಡ್ಡುತ್ತಿದ್ದಾರೆ ಎಂದು ಸಿಎಎ ವಿರೋಧಿ ಹೋರಾಟಗಾರ ಅಖಿಲ್ ಗೊಗೋಯ್ ಜೈಲಿನಿಂದಲೇ ಪತ್ರ ಬರೆದಿದ್ದಾರೆ.

- Advertisement -

 ಕೋರ್ಟ್ ಅನುಮತಿ ಇಲ್ಲದೆ ಗೊಗೋಯ್ ಅವರನ್ನು ಡಿಸೆಂಬರ್ 18, 2019ರಂದು ದೆಹಲಿಗೆ ಕರೆದೊಯ್ಯಲಾಗಿತ್ತು ಎಂದು ಗೊಗೋಯ್ ಅವರ ಹೊಸ ರಾಜಕೀಯ ಪಕ್ಷ ರೈಜೋರ್ ದಳ ಗೊಗೋಯ್ ಬರೆದ ಪತ್ರವನ್ನು ಬಿಡುಗಡೆ ಮಾಡಿ ಹೇಳಿದೆ.

NIA ಕೇಂದ್ರ ಕಚೇರಿಯಲ್ಲಿ ಲಾಕ್ ಅಪ್ ನಲ್ಲಿ ಕೊಳಕಾದ ಬ್ಲಾಂಕೆಟ್ ವೊಂದನ್ನು ನೀಡಲಾಗಿತ್ತು. ನೆಲದ ಮೇಲೆ 3 ರಿಂದ 4 ಡಿಗ್ರಿ ಸೆಲ್ಸಿಯಸ್ ನಲ್ಲಿಯೇ ಮಲಗಬೇಕಾಗಿತ್ತು. ಆರೆಸ್ಸೆಸ್ ಗೆ ಸೇರ್ಪಡೆಯಾದರೆ ಜಾಮೀನು ದೊರಕಿಸುವುದಾಗಿ ವಿಚಾರಣೆ ವೇಳೆ NIA ಅಧಿಕಾರಿಗಳು ಆಮಿಷವೊಡಿದ್ದರು. ಬಿಜೆಪಿಗೆ ಸೇರ್ಪಡೆಯಾದರೆ ತೆರವಾಗುವ ಕ್ಷೇತ್ರದಿಂದ ಗೆಲ್ಲಿಸಿ ಸಚಿವರನ್ನಾಗಿ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದರು ಎಂದು ಗೊಗೋಯ್ ಪತ್ರದಲ್ಲಿ ತಿಳಿಸಿದ್ದಾರೆ.

- Advertisement -

 ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗುತ್ತಿದ್ದು, 10 ವರ್ಷಗಳ ಜೈಲುಶಿಕ್ಷೆಯ ಬೆದರಿಕೆ ಹಾಕಲಾಗಿದೆ.  2020 ಡಿಸೆಂಬರ್ ನಿಂದಲೂ ನೆಮ್ಮದಿ ಇಲ್ಲದಂತಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಕೋವಿಡ್-19 ಮತ್ತಿತರ ಅನಾರೋಗ್ಯ ಸಮಸ್ಯೆಯಿಂದಾಗಿ ಅವರನ್ನು ಗುವಾಹಟಿಯ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸಿಎಎ ವಿರೋಧಿ ಹೋರಾಟದಲ್ಲಿ ಹಿಂಸಾಚಾರ ಆರೋಪದ ಮೇರೆಗೆ ಡಿಸೆಂಬರ್ 2019ರಂದು NIA ಅಖಿಲ್ ಗೊಗೋಯ್ ಅವರನ್ನು ಬಂಧಿಸಿತ್ತು.

Join Whatsapp