ಬಿಜೆಪಿ ಹಿಂದುತ್ವದ ಪರವಾಗಿದ್ದರೆ ‘ನಮಗೆ ಮುಸ್ಲಿಂ, ಕ್ರೈಸ್ತರ ಓಟು ಬೇಡ’ ಎಂದು ಘೋಷಿಸಲಿ – ಹಿಂದೂ ಮಹಾಸಭಾ

Prasthutha|

ಮಂಗಳೂರು: ರಾಜ್ಯದಲ್ಲಿ‌ ಹಿಂದೂ ಕಾರ್ಯಕರ್ತರ ಕೊಲೆಯಾಗುತ್ತಿದೆ. ಆದರೆ ಬಿಜೆಪಿಗೆ ನ್ಯಾಯ ದೊರಕಿಸಿ ಕೊಡಲು ಸಾಧ್ಯವಾಗುತ್ತಿಲ್ಲ. ಬಿಜೆಪಿ ನಿಜಕ್ಕೂ ಹಿಂದೂಗಳ ಪರವಾಗಿದ್ದರೆ ನಮಗೆ ಮುಸ್ಲಿಂ ಮತ್ತು ಕ್ರೈಸ್ತರ ಓಟು ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಘೋಷಿಸಲಿ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ ಸವಾಲು ಹಾಕಿದ್ದಾರೆ.

- Advertisement -

ಮಂಗಳೂರಿನಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲು ಸಾಲು ಹಿಂದೂಗಳ ಕೊಲೆಯನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಈಗ ಹಿಂದೂಗಳ ಹತ್ಯೆಗೆ ನ್ಯಾಯ ಕೊಡಿಸಲಾಗದ ಸ್ಥಿತಿಯಲ್ಲಿದೆ ಎಂದರು.

ಬಿಜೆಪಿಯನ್ನು ಕೆಲವರು ಕೇಸರೀ ಪಕ್ಷ ಎನ್ನುತ್ತಾರೆ. ಆದರೆ ಅವರದು ಯಾವ ರೀತಿಯ ಕೇಸರಿ, ಯಾವ ಹಿಂದುತ್ವ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದರು.

- Advertisement -

ಮುಖ್ಯಮಂತ್ರಿ ಬೊಮ್ಮಾಯಿಯಿಂದ ಹಿಂದೂಗಳು ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ. ಯಾಕೆಂದರೆ ಅವರು ಬಿಜೆಪಿಗೆ ಆಮದುಗೊಂಡ ನಾಯಕರು. ಅವರ ಮೂಲ ಸಿದ್ಧಾಂತವೇ ಬೇರೆ ಎಂದು ಧರ್ಮೇಂದ್ರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಬಿಜೆಪಿಯ ಇಂತಹ ವರ್ತನೆಗೆ ಪರ್ಯಾಯವಾಗಿ ಒಂದು ಕೇಸರೀ ಒಕ್ಕೂಟವನ್ನು ರಚಿಸಲಿದ್ದು, ಹಿಂದುತ್ವದ ಒಲವಿನ ಎಲ್ಲರನ್ನೂ ಒಗ್ಗೂಡಿಸಲಿದ್ದೇವೆ. ಅಲ್ಲದೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾವೂ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದೇವೆ ಎಂದ ಅವರು, ಹಿಂದೂ ಮಹಾಸಭಾದಿಂದ ಮಾತ್ರ ಹಿಂದೂಗಳ ರಕ್ಷಣೆ ಸಾಧ್ಯ ಎಂದರು.

Join Whatsapp