ಹೈದರಾಬಾದ್: ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ನಿಜಾಮರ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಿಹ್ನೆ, ಗುಮ್ಮಟಗಳನ್ನು ಧ್ವಂಸಗೊಳಿಸಲಾಗುವುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಶುಕ್ರವಾರ ಹೇಳಿದ್ದಾರೆ.
ರಾಜ್ಯದಲ್ಲಿ ಹೊಸದಾಗಿ ನಿರ್ಮಿಸಲಾದ ರಾಜ್ಯ ಸಚಿವಾಲಯದ ಗುಮ್ಮಟಗಳನ್ನು ನೆಲಸಮಗೊಳಿಸಲಾಗುವುದು ಎಂದೂ ಅವರು ಹೇಳಿದರು.
“ಜನಂ ಗೋಸಾ-ಬಿಜೆಪಿ ಭರೋಸಾ” ಕಾರ್ಯಕ್ರಮದ ಭಾಗವಾಗಿ ಕುಕಟ್ಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಓಲ್ಡ್ ಬೋಯಿನ್’ಪಲ್ಲಿಯಲ್ಲಿ ಪಕ್ಷ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ನಿಜಾಮರ ಆಡಳಿತದ ಗುಲಾಮಗಿರಿಯ ಸಂಕೇತಗಳಾದ ಎಲ್ಲಾ ರೀತಿಯ ಸಂರಚನೆಗಳನ್ನು ಅಳಿಸಿಹಾಕುತ್ತೇವೆ ಎಂದು ಹೇಳಿದರು.