ಐಸಿಸಿ T-20 ವಿಶ್ವಕಪ್ : ಟೀಮ್ ಇಂಡಿಯಾ ವಿರುದ್ಧದ ಹೈ ವೋಲ್ಟೇಜ್ ಕದನಕ್ಕೆ ಪಾಕಿಸ್ತಾನ ತಂಡ ಪ್ರಕಟ

Prasthutha|

ದುಬೈ : ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ಭಾರತದ ವಿರುದ್ಧ ನಡೆಯಲಿರುವ
ಹೈವೋಲ್ಟೇಜ್‌ ಪಂದ್ಯಕ್ಕೆ ಪಾಕಿಸ್ತಾನ 12 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದೆ.
ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಭಾನುವಾರ ಸಂಜೆ 7.30ಕ್ಕೆ
ನಡೆಯಲಿರುವ ಪಂದ್ಯ ತೀವ್ರ ಕುತೂಹಲ ಕೆರಳಿಸಿದ್ದು, ಬಾಬರ್ ಅಜಂ ನಾಯಕತ್ವದಲ್ಲಿ ಅಳೆದು-ತೂಗಿ ಯುವ ಹಾಗೂ ಅನುಭವಿ 12 ಆಟಗಾರರನ್ನೊಳಗೊಂಡ ತಂಡವನ್ನು ಹೆಸರಿಸಿದೆ.

- Advertisement -

ಟಿ-20 ಕ್ರಿಕೆಟ್’ನಲ್ಲಿ ಅಪಾರ ಅನುಭವ ಹೊಂದಿರುವ ಆಲ್ ರೌಂಡರ್ ಶೋಯೆಬ್ ಮಲಿಕ್‌ ಹಾಗೂ ಮೊಹಮ್ಮದ್ ಹಫೀಜ್‌ಗೆ ತಂಡದಲ್ಲಿ ಮಣೆ ಹಾಕಲಾಗಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ವಿರುದ್ದ ಶತಕ ಸಿಡಿಸಿದ್ದ ಫಖರ್ ಝಾಮಾನ್​ ಹಾಗೂ ವೇಗದ ಬೌಲಿಂಗ್ ವಿಭಾಗದಲ್ಲಿ ಹಸನ್, ಶಾಹಿನ್ ಅಫ್ರಿದಿ ಹಾಗೂ ಇಮಾದ್ ವಾಸಿಂ, ಶಾದಾಬ್ ಖಾನ್ ಸ್ಪಿನ್ನರ್​ಗಳಾಗಿ ಕಾಣಿಸಿಕೊಂಡಿದ್ದಾರೆ.

ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ 2007ರಿಂದ ಇದುವರೆಗೆ 5 ಬಾರಿ ಮುಖಾಮುಖಿಯಾಗಿದ್ದು, ಆಡಿದ ಐದೂ ಪಂದ್ಯಗಳಲ್ಲೂ ಬ್ಲೂ ಬಾಯ್ಸ್ ಗೆಲುವಿನ ನಗೆ ಬೀರಿದೆ.

- Advertisement -

ಪಾಕ್​ 12 ರ ಬಳಗ:

ಬಾಜರ್ ಆಜಂ (ನಾಯಕ), ಮೊಹಮ್ಮದ್ ರಿಜ್ವಾನ್, ಫಖರ್ ಝಾಮಾನ್, ಮೊಹಮ್ಮದ್ ಹಫೀಪ್, ಶೊಯೇಬ್ ಮಲಿಕ್, ಆಸಿಫ್ ಅಲಿ, ಇಮಾದ್ ವಾಸಿಂ, ಶಾದಾಬ್ ಖಾನ್, ಹಸನ್ ಅಲಿ, ಶಾಹಿನ್ ಅಫ್ರಿದಿ, ಹಾರಿಸ್ ರೌಫ್, ಹೈದರ್ ಅಲಿ.

Join Whatsapp