ಇಬ್ರಾಹಿಂ ಕಾಂಗ್ರೆಸ್ ನಲ್ಲೇ ಉಳಿಯುತ್ತಾರೆ: ಯು.ಟಿ. ಖಾದರ್

Prasthutha|

ಬಂಟ್ವಾಳ: ಸಿ.ಎಂ.ಇಬ್ರಾಹಿಂ ಅವರ ಅಸಮಾಧಾನದ ವಿಚಾರಕ್ಕೂ ತನಗೆ ನೀಡಿದ ವಿಧಾನಸಭಾ ಉಪನಾಯಕನ ಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವಿಧಾನಸಭೆಯ ವಿಪಕ್ಷದ ಉಪನಾಯಕನಾಗಿ ಆಯ್ಕೆಯಾಗಿರುವ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.

- Advertisement -

ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಸ್ಥಾನ ಸಿಗಲಿಲ್ಲ ಎಂದು ಸಿ.ಎಂ.ಇಬ್ರಾಹಿಂ ಅವರು ಅಸಮಾಧಾನದ ವ್ಯಕ್ತಪಡಿಸಿದ ಬಳಿಕ ಯು.ಟಿ.ಖಾದರ್ ಅವರಿಗೆ ವಿಧಾನಸಭಾ ವಿಪಕ್ಷ ಸ್ಥಾನ ಸಿಕ್ಕಿದೆ ಎಂಬ ಮಾತುಗಳ ಕುರಿತು ಅವರು ಪ್ರತಿಕ್ರಿಯಿಸಿದರು. ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿಯವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯು ಟಿ ಖಾದರ್, ನಮ್ಮ ಹಿರಿಯ ನಾಯಕರಾದ ಇಬ್ರಾಹಿಂ ಅವರು ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಕಾಂಗ್ರೆಸ್ ಗೆ ಮುಂದೆಯೂ ಪಕ್ಷಕ್ಕೆ ಅವರ ಕೊಡುಗೆ ಅಗತ್ಯವಿದೆ. ಹೀಗಾಗಿ ಅವರು ಕಾಂಗ್ರೆಸ್ನಲ್ಲೇ ಇರುತ್ತಾರೆ ಎಂದು ಹೇಳಿದರು.

ವಿಧಾನ ಪರಿಷತ್ತು ಮತ್ತು ವಿಧಾನಸಭೆ ಎರಡೂ ಬೇರೆ ಬೇರೆ. ಉಪನಾಯಕನ ಸ್ಥಾನದ ಕುರಿತು ಹಿಂದೆಯೇ ಚರ್ಚೆಯಾಗಿತ್ತು. ಇವೆರಡಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಸಣ್ಣ ವಯಸ್ಸಿನಿಂದಲೂ ಕಾಂಗ್ರೆಸ್ ನಲ್ಲಿ ಹಲವು ಸ್ಥಾನಗಳನ್ನು ಅಲಂಕರಿಸಿ ಶಾಸಕನಾಗಿ, ಸಚಿವನಾಗಿ ಪ್ರಮುಖ ಇಲಾಖೆಗಳಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡಿದ ಕಾರಣ ಈ ಸ್ಥಾನ ಲಭಿಸಿದೆ ಎಂದರು.



Join Whatsapp