ದೆಹಲಿ: ಕೇಂದ್ರ ಸರ್ಕಾರ 1989ರ ಬ್ಯಾಚ್ ನ ಐಎಎಸ್ ಅಧಿಕಾರಿ ಧರ್ಮೇಂದ್ರ ಅವರನ್ನು ದೆಹಲಿಯ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿದೆ.
ಐಎಎಸ್ ಅಧಿಕಾರಿ ನರೇಶ್ ಕುಮಾರ್ ಅವರ ಸ್ಥಾನಕ್ಕೆ ಧರ್ಮೇಂದ್ರ ನೇಮಕಗೊಂಡಿದ್ದಾರೆ.
ನರೇಶ್ ಅವರ ವಿಸ್ತರಣೆಯು ಆಗಸ್ಟ್ 31 ರಂದು ಕೊನೆಗೊಂಡಿದೆ. ನರೇಶ್ ಅವರ ಅಧಿಕಾರವಧಿಯನ್ನು ಎರಡು ಬಾರಿ ವಿಸ್ತರಣೆ ಮಾಡಲಾಗಿತ್ತು.
ಸಕ್ಷಮ ಪ್ರಾಧಿಕಾರದ ಅನುಮೋದನೆಯೊಂದಿಗೆ, ಧರ್ಮೇಂದ್ರ, IAS (AGMUT:1989) ಅವರನ್ನು ಮುಖ್ಯ ಕಾರ್ಯದರ್ಶಿಯಾಗಿ ಅರುಣಾಚಲ ಪ್ರದೇಶದಿಂದ ದೆಹಲಿಗೆ ವರ್ಗಾಯಿಸಲಾಗಿದೆ .