ಬೂತ್ ಮಟ್ಟದಲ್ಲಿ ಮತ್ತೆ ಪಕ್ಷ ಸಂಘಟಿಸೋಣ: ಇನಾಯತ್ ಅಲಿ

Prasthutha|

►ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಾಲೋಚನಾ ಸಭೆ

ಗುರುಪುರ: ಇಲ್ಲಿನ ಕೈಕಂಬ ಮೆಘಾ ಫ್ಲಾಝಾ ಸಭಾಂಗಣದಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಯಕರ್ತರ ಸಮಾಲೋಚನಾ ಸಭೆ ನಡೆಯಿತು.

- Advertisement -

ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಬೆನ್ನೆಲುಬಾಗಿ ಸದಾ ನಾನಿರುತ್ತೇನೆ, ಕ್ಷೇತ್ರದಲ್ಲಿ ನಮ್ಮ ಸೋಲಿನ ಬಗ್ಗೆ ಪರಾಮರ್ಶನ ಮಾಡಿ ಬೂತ್ ಮಟ್ಟದಲ್ಲಿ ಜೊತೆಯಾಗಿ ಮತ್ತೆ ಪಕ್ಷ ಸಂಘಟಿಸುವ ಕೆಲಸ ಮಾಡೋಣ ಹಾಗೂ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಐತಿಹಾಸಿಕ ಗ್ಯಾರಂಟಿ ಯೋಜನೆಗಳನ್ನು ಕ್ಷೇತ್ರದ ಮನೆ ಮನೆಗೆ ತಲುಪಿಸಲು ಮಾರ್ಗಸೂಚಿ ತಯಾರಿ ನಡೆಯುತ್ತಿದ್ದು, ಇದರ ಪರಿಪೂರ್ಣ ಅನುಷ್ಠಾನಕ್ಕೆ ಕಾರ್ಯಕರ್ತರು ಕೂಡ ಕೈಜೋಡಿಸಬೇಕು ಎಂದು ಅವರು ಹೇಳಿದರು.

ಗುರುಪುರ ಬ್ಲಾಕ್, ವಲಯ, ಬೂತ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಗುರುಪುರ ಬ್ಲಾಕ್ ಅಧ್ಯಕ್ಷ ಸುರೇಂದ್ರ ಕಂಬಳಿ, ಯು.ಪಿ.ಇಬ್ರಾಹಿಮ್, ಗಿರೀಶ್ ಆಳ್ವ, ಸುಹೈಲ್ ಕಂದಕ್, ಪ್ರಥ್ವಿರಾಜ್ ಆರ್.ಕೆ, ಬಾಷ ಗುರುಪುರ, ಕೃಷ್ಣ ಅಮೀನ್, ವಿನಯ ಶೆಟ್ಟಿ, ನೂರ್ ಮೊಹಮ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

- Advertisement -