‘ಅಂಬೇಡ್ಕರ್‍‌ರನ್ನು ಗುಂಡಿಟ್ಟು ಕೊಲ್ಲುತ್ತಿದ್ದೆ’: ನಾಲಿಗೆ ಹರಿಬಿಟ್ಟ ಸಂಘಪರಿವಾರ ನಾಯಕನ ವಿರುದ್ಧ ಕ್ರಮಕ್ಕೆ BSP ಆಗ್ರಹ

Prasthutha|

ಹೈದರಾಬಾದ್: ಹಿಂದುತ್ವ ಸಂಘಟನೆಯಾದ ರಾಷ್ಟ್ರೀಯ ದಲಿತ ಸೇನೆಯ ಸಂಸ್ಥಾಪಕ ಹಮಾರಾ ಪ್ರಸಾದ್ ಅವರು “ಗೋಡ್ಸೆ ಗಾಂಧಿಯನ್ನು ಕೊಂದಂತೆ ನಾನು ಅಂಬೇಡ್ಕರ್’ರನ್ನು ಗುಂಡಿಟ್ಟು ಕೊಲ್ಲುತ್ತಿದ್ದೆ” ಎಂದು ಹೇಳುವ ಮೂಲಕ ನಾಲಿಗೆ ಹರಿಬಿಟ್ಟಿದ್ದಾರೆ.  ಬಹುಜನ ಸಮಾಜ ಪಕ್ಷದ ತೆಲಂಗಾಣ ಮುಖ್ಯಸ್ಥ ಆರ್’ಎಸ್ ಪ್ರವೀಣ್ ಕುಮಾರ್ ಅವರು ಹಮಾರಾ ಪ್ರಸಾದ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ ಮತ್ತು ಪ್ರಿವೆಂಟಿವ್ ಡಿಟೆನ್ಶನ್ ಆಕ್ಟ್ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

- Advertisement -

”ಅಂಬೇಡ್ಕರ್ ಬರೆದಿರುವ ‘ಹಿಂದೂಯಿಸಂನಲ್ಲಿ ಒಗಟುಗಳು’ ಎನ್ನುವ ಪುಸ್ತಕ ಜನಸಾಮಾನ್ಯರಿಗೆ ಜ್ಞಾನೋದಯಕ್ಕೆ ಒಂದು ವಿವರಣೆ ಎಂದು ಹೇಳಿದ್ದಾರೆ. ಈ ಮನುಷ್ಯ (ಅಂಬೇಡ್ಕರ್) ಸ್ಪಷ್ಟವಾಗಿ 12 ಡಿಗ್ರಿ (ಮಾಸ್ಟರ್ಸ್) ಹೊಂದಿರುವ ಬುದ್ಧಿಜೀವಿಯಾಗಿದ್ದಾರೆ. ರಾಷ್ಟ್ರನಾಯಕನಾದವನು ದೇಶದ ಎಲ್ಲ ಜನರನ್ನು ಸಮಾನವಾಗಿ ಕಾಣಬೇಕು. ಅವನು ಕಷ್ಟ ಅನುಭವಿಸಿದರೂ ಇತರರ ಮೇಲೆ ತನ್ನ ದ್ವೇಷವನ್ನು ತೋರಿಸಬಾರದು.” ಅಂಬೇಡ್ಕರ್ ಅವರು ಈ ರೀತಿಯ ಕಸ ಬರೆಯುವ ಮೂಲಕ ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಹಮಾರಾ ಪ್ರಸಾದ್ ಹೇಳಿದ್ದಾರೆ. ನಾನು ಅಂಬೇಡ್ಕರ್ ಬದುಕಿದ್ದಾಗ ಹುಟ್ಟಿದ್ದರೆ, ಈ ಪುಸ್ತಕ ನನ್ನ ಕಣ್ಣಿಗೆ ಬಿದ್ದಿದ್ದರೆ, ಗೋಡ್ಸೆ ಗಾಂಧಿಗೆ ಹೇಗೆ ಗುಂಡು ಹಾರಿಸಿದನೋ ಅದೇ ರೀತಿ ನಾನು ಅಂಬೇಡ್ಕರ್’ಗೆ ಗುಂಡು ಹಾರಿಸುತ್ತಿದ್ದೆ” ಎಂದು ವಿಡಿಯೋದಲ್ಲಿ ಹಮಾರಾ ಪ್ರಸಾದ್ ಮಾತನಾಡಿದ್ದಾರೆ.

‘ಈಡಿಯಟ್’ ವಿರುದ್ಧ 153 ಎ ಅಡಿಯಲ್ಲಿ ಸರ್ಕಾರ ಏಕೆ ಪ್ರಕರಣ ದಾಖಲಿಸಿಲ್ಲ ಎಂದು ಕೇಳಿದ್ದಾರೆ. ಮತ್ತು ಪ್ರಿವೆಂಟಿವ್ ಡಿಟೆನ್ಶನ್ ಆಕ್ಟ್’ನ ಅಡಿಯಲ್ಲಿ ಅವನನ್ನು ಜೈಲಿನಲ್ಲಿಡಿ ಎಂದು ಬಿಆರ್ ಎಸ್ ಪಕ್ಷವನ್ನು ಟ್ಯಾಗ್ ಮಾಡಿ ಆರ್’ಎಸ್ ಪ್ರವೀಣ್ ಕುಮಾರ್ ಅವರು ವಿಡಿಯೊ ಕ್ಲಿಪ್ಪಿಂಗ್ ಶೇರ್ ಮಾಡುವುದರ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

”ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ನಿಂದಿಸುವ ಮತ್ತು ಪರಿಶಿಷ್ಟ ಜಾತಿಯ ನಾಗರಿಕರ ಭಾವನೆಗಳಿಗೆ ನೋವುಂಟು ಮಾಡುವ ವೀಡಿಯೊಗಳನ್ನು ಮಾಡಿ ಅದನ್ನು ಇತರರಿಗೆ ಹಂಚಿದ್ದಾರೆ” ಎಂದು ದಲಿತಪರ ಹೋರಾಟಗಾರ ಕಾರ್ತಿಕ್ ನವಯನ್ ಅವರು ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರಿಗೆ ಆನ್’ಲೈನ್ ದೂರು ನೀಡಿದ್ದಾರೆ.

ಆದರೆ, ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ಟಿಎನ್’ಎಂ ಜೊತೆ ಮಾತನಾಡಿದ್ದು, ಹಮಾರಾ ಪ್ರಸಾದ್ ವಿರುದ್ಧ ಯಾವುದೇ ದೂರುಗಳು ಬಂದಿಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ದಲಿತಪರ ಸಂಘಟನೆಗಳು ಮತ್ತು ಪ್ರಜ್ಞಾವಂತ ಜನರು, ‘ತೆಲಂಗಾಣ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತಕ್ಷಣ ಹಮಾರಾ ಪ್ರಸಾದ್’ನನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದ್ದಾರೆ.



Join Whatsapp