ಮೈತ್ರಿ ವಿಚಾರದಲ್ಲಿ ನಾನು ಮಾತಾಡಲ್ಲ: ಹೆಚ್’ಡಿ ದೇವೇಗೌಡ

Prasthutha|

ನವದೆಹಲಿ: ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಈ ಹಿಂದೆಯೇ ಹೇಳಿದ್ದೇನೆ. ಮೈತ್ರಿ ವಿಚಾರದ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾತನಾಡುತ್ತಾರೆ ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಹೇಳಿದ್ದಾರೆ.

- Advertisement -


ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್ಡಿ ದೇವೇಗೌಡ, ಕಾವೇರಿ ವಿಷಯದ ಬಗ್ಗೆ ಬೆಂಗಳೂರಿನಲ್ಲಿದ್ದಾಗಲೇ ಕೋಲಾರದ ಎಂಎಲ್ಸಿಯನ್ನ ಕಳುಹಿಸಿದ್ರು. ಸರ್ವಪಕ್ಷ ಸಭೆಗೆ ಬನ್ನಿ, ಸಲಹೆ ಕೊಡಿ ಎಂದು ಹೇಳಿದ್ರು. ನಾನು ಈಗ ಬರುವ ಸ್ಥಿತಿಯಲ್ಲಿಲ್ಲ, ಹಿಂದೆ ಹೇಗೆ ಸಹಕಾರ ಕೊಟ್ಟಿದ್ನೋ ಹಾಗೆಯೇ ಸಹಕಾರ ಕೊಡ್ತೀನಿ ಎಂದು ಹೇಳಿದ್ದೆ ಎಂದು ಹೇಳಿದರು.


ಇನ್ನು ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತೆ ಎಂಬ ವಿಚಾರಕ್ಕೂ ಸಂಬಂಧಿಸಿದಂತೆ ಮಾತನಾಡಿದ ಎಚ್ಡಿ ದೇವೇಗೌಡರು, ಬಿಜೆಪಿ ಜೊತೆ ಮೈತ್ರಿ ವಿಚಾರವಾಗಿ ನಾನೇನು ಮಾತನಾಡಲ್ಲ. ಅದನ್ನು ಎಚ್ಡಿ ಕುಮಾರಸ್ವಾಮಿ ನೋಡಿಕೊಳ್ತಾರೆ ಎಂದು ಹೇಳಿದರು.

Join Whatsapp