ಆರೆಸ್ಸಸ್ ಚಡ್ಡಿ ಸುಡುವ ವಿಚಾರದ ಬಗ್ಗೆ ನಾನೇನು ಮಾತನಾಡಲ್ಲ: ಮಾಜಿ ಸಿಎಂ ಯಡಿಯೂರಪ್ಪ

Prasthutha|

ಬೆಳಗಾವಿ: ಕಾಂಗ್ರೆಸ್ಸಿಗರು ಆರ್‌ಎಸ್‌ಎಸ್‌ ನ ಚಡ್ಡಿ ಸುಡುವ ವಿಚಾರದಲ್ಲಿ ನಾನೇನೂ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಶಾಸಕ ಬಿ.ಎಸ್‌. ಯಡಿಯೂರಪ್ಪ ಹೇಳಿದರು.ವಿಧಾನ ಪರಿಷತ್‌ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಸೋಮವಾರ ನಗರಕ್ಕೆ ಬಂದ ಅವರು, ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

- Advertisement -

ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ನಾನು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿದ್ದು ಆಕಸ್ಮಿಕ. ಅವರು ಹುಬ್ಬಳ್ಳಿಗೆ ಹೊರಡಲು ಬಂದಿದ್ದರು, ನಾನು ಬೆಳಗಾವಿಗೆ ಬರಲು ತಯಾರಾಗಿದ್ದೆ. ಆಕಸ್ಮಿಕವಾಗಿ ಸಿಕ್ಕಿದ್ದರಿಂದ ಕುಶಲೋಪರಿ ವಿಚಾರಿಸಿದೆವು. ಒಂದೇ ಒಂದು ಪದ ರಾಜಕೀಯ ಮಾತನಾಡಿಲ್ಲ ಎಂದರು.

ವಿರೋಧ ಪಕ್ಷದವರು ಎಂಬ ಕಾರಣಕ್ಕೆ ವಿರೋಧಿಗಳಾಗೇ ಬದುಕಬೇಕೆಂದೇನಿಲ್ಲ. ಪರಸ್ಪರ ಆತ್ಮೀಯತೆ, ವಿಶ್ವಾಸ ಇರಬೇಕು. ರಾಜಕಾರಣಕ್ಕೂ ಆತ್ಮೀಯತೆಗೂ ಅಜಗಜಾಂತರವಿದೆ. ಅವರು ಅವರದೇ ಶೈಲಿಯಲ್ಲಿ ರಾಜಕಾರಣ ಮಾಡುತ್ತಾರೆ. ನಾವು ನಮ್ಮ ಪದ್ಧತಿ ಅನುಸರಿಸುತ್ತಿದ್ದೇವೆ’ ಎಂದರು



Join Whatsapp