ನಾನು ಬೇರೆ ಬಿಜೆಪಿ ಶಾಸಕರಂತೆ ಕದ್ದುಮುಚ್ಚಿ ಬರಲ್ಲ: ಡಿಕೆಶಿ ಭೇಟಿಯಾದ ಸೋಮಶೇಖರ್

Prasthutha|

ಬೆಂಗಳೂರು: ಬಿಜೆಪಿಯ ಬೇರೆ ಶಾಸಕರೂ ಕೂಡ ರಾತ್ರಿ ವೇಳೆ ಮಾಧ್ಯಮಗಳ ಕಣ್ತಪ್ಪಿಸಿ ಬಂದು ಡಿಸಿಎಂ ಡಿ.ಕೆ.ಶಿವಕುಮಾರ್ ನ್ನು ಭೇಟಿ ಮಾಡಿ ಹೋಗ್ತಾರೆ. ನಾನು ಬೇರೆಯವರಂತೆ ಕದ್ದುಮುಚ್ಚಿ ಬರಲ್ಲ. ಎಲ್ಲರೆದುರೇ ಬಂದು ಭೇಟಿ ಮಾಡಿದ್ದೇನೆ ಎಂದು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅಚ್ಚರಿಯ ಹೇಳಿಕೆ ನೀಡಿದರು.

- Advertisement -

ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಡಿ.ಕೆ.ಶಿವಕುಮಾರ್ ಬೆಂಗಳೂರಿನ ಉಸ್ತುವಾರಿ ಸಚಿವರು. ನಮ್ಮ ಕ್ಷೇತ್ರ ಸೇರಿದಂತೆ ಬೆಂಗಳೂರಿನ ಅಭಿವೃದ್ಧಿಯ ಬಗ್ಗೆ ಮಾತನಾಡಲು ಭೇಟಿ ಮಾಡಿದ್ದೇನೆ. ಹೊಸ ವರ್ಷದ ಶುಭಾಶಯ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

Join Whatsapp