ದಲಿತನಾಗಿದ್ದಕ್ಕೆ ನನ್ನನ್ನೂ ದೇಗುಲದೊಳಗೆ ಸೇರಿಸಲ್ಲ: ಮಾಜಿ ಡಿಸಿಎಂ ಪರಮೇಶ್ವರ್ ಬೇಸರ

Prasthutha|

ತುಮಕೂರು: ರಾಜ್ಯದಲ್ಲಿ ಸಚಿವ, ಶಾಸಕ, ಡಿಸಿಎಂ ಆಗಿದ್ದರೂ ದಲಿತನೆಂಬ ಕಾರಣಕ್ಕೆ ನನ್ನನ್ನು ದೇಗುಲದೊಳಗೆ ಸೇರಿಸುವುದಿಲ್ಲ ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಬೇಸರ ಹೊರಹಾಕಿದ್ದಾರೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಜನ್ಮದಿನವಾದ ಇಂದು ತುಮಕೂರಿನ ಕೊರಟಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ದೇಗಲು ಪ್ರವೇಶಕ್ಕೆ ಅನುಮತಿ ನಿರಾಕರಣೆಯ ಬಗ್ಗೆ ಮಾತನಾಡಿದ್ದಾರೆ.

- Advertisement -

ಕೊರಟಗೆರೆ ಪಟ್ಟಣ ಪಂಚಾಯಿತಿ ವತಿಯಿಂದ ಆಯೋಜಿಸಲಾಗಿದ್ದ ಅಂಬೇಡ್ಕರ್ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಪರಮೇಶ್ವರ್, ದೇವಸ್ಥಾನಕ್ಕೆ‌ ಹೋದರೆ ಸ್ವಲ್ಪ ಅಲ್ಲೇ ನಿಲ್ಲುವಂತೆ ಹೇಳುತ್ತಾರೆ! ಅಲ್ಲೇ ನಿಲ್ಲಿ ಎಂದು ಮಂಗಳಾರತಿ ತಟ್ಟೆ ತಂದು ಕೊಡುತ್ತಾರೆ, ಎಲ್ಲಿ ನಾವು ದೇಗುಲದೊಳಗೆ ಪ್ರವೇಶಿಸಿ ಬಿಡುತ್ತೀವಾ ಎಂದು ಈ ರೀತಿ ಮಾಡ್ತಾರೆ. ಈಗಲೂ ಈ ರೀತಿಯ ಪರಿಸ್ಥಿತಿ ಸಮಾಜದಲ್ಲಿದೆ ಎಂದು ಹೇಳಿದ್ದಾರೆ.



Join Whatsapp